ADVERTISEMENT

ಒಂದೇ ದಿನ 616 ಮಂದಿಗೆ ಸೋಂಕು, ಐವರ ಸಾವು

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ ಪಾಸಿಟಿವ್ ಪ್ರಕರಣಗಳು

​ಪ್ರಜಾವಾಣಿ ವಾರ್ತೆ
Published 1 ಮೇ 2021, 15:28 IST
Last Updated 1 ಮೇ 2021, 15:28 IST

ಕಾರವಾರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ದಿನವೊಂದರಲ್ಲಿ ಈವರೆಗಿನ ಅತಿ ಹೆಚ್ಚು ಪ್ರಕರಣಗಳು ಶನಿವಾರ ದಾಖಲಾಗಿದ್ದು, 616 ಮಂದಿಗೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯ 12 ತಾಲ್ಲೂಕುಗಳ ಪೈಕಿ ಹೊನ್ನಾವರ ಮತ್ತು ಮುಂಡಗೋಡ ತಾಲ್ಲೂಕುಗಳಲ್ಲಿ ಮಾತ್ರ ಯಾವುದೇ ಹೊಸ ಪ್ರಕರಣಗಳು ಶನಿವಾರ ಕಂಡುಬಂದಿಲ್ಲ. ಕಾರವಾರ ತಾಲ್ಲೂಕಿನಲ್ಲಿ 100, ಅಂಕೋಲಾ ತಾಲ್ಲೂಕಿನಲ್ಲಿ 127 ಮತ್ತು ಕುಮಟಾ ತಾಲ್ಲೂಕಿನಲ್ಲಿ 114 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಉಳಿದಂತೆ, ಶಿರಸಿಯಲ್ಲಿ 68, ಭಟ್ಕಳದಲ್ಲಿ 65, ಹಳಿಯಾಳದಲ್ಲಿ 53, ಜೊಯಿಡಾದಲ್ಲಿ 43, ಯಲ್ಲಾಪುರದಲ್ಲಿ 24 ಮತ್ತು ಸಿದ್ದಾಪುರ ತಾಲ್ಲೂಕಿನಲ್ಲಿ 22 ಮಂದಿಗೆ ಸೋಂಕು ದೃಢಪಟ್ಟಿದೆ.

ಕೋವಿಡ್‌ನಿಂದಾಗಿ ಶನಿವಾರ ಒಂದೇ ದಿನ ಜಿಲ್ಲೆಯಲ್ಲಿ ಐವರು ಮೃತಪಟ್ಟಿದ್ದಾರೆ. ಅವರಲ್ಲಿ ಕಾರವಾರ ತಾಲ್ಲೂಕಿನಲ್ಲಿ ಇಬ್ಬರು, ಅಂಕೋಲಾ, ಕುಮಟಾ ಮತ್ತು ಶಿರಸಿ ತಾಲ್ಲೂಕಿನಲ್ಲಿ ತಲಾ ಒಬ್ಬರು ಸೇರಿದ್ದಾರೆ.

ADVERTISEMENT

ಕಾರವಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು 415, ಹಳಿಯಾಳದಲ್ಲಿ 310, ಯಲ್ಲಾಪುರದಲ್ಲಿ 277, ಕುಮಟಾದಲ್ಲಿ 275, ಅಂಕೋಲಾದಲ್ಲಿ 272, ಶಿರಸಿಯಲ್ಲಿ 205, ಸಿದ್ದಾಪುರದಲ್ಲಿ 162, ಭಟ್ಕಳದಲ್ಲಿ 112, ಹೊನ್ನಾವರದಲ್ಲಿ 101, ಜೊಯಿಡಾದಲ್ಲಿ 85 ಹಾಗೂ ಮುಂಡಗೋಡದಲ್ಲಿ 72 ಸಕ್ರಿಯ ಪ್ರಕರಣಗಳು ಶನಿವಾರ ವರದಿಯಾಗಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.