ಅಂಕೋಲಾ: ಭಾರತವು ವಿಶ್ವಕ್ಕೆ ಯೋಗವನ್ನು ಪರಿಚಯಿಸಿ, ನಾವು ವಿಶ್ವ ಗುರುವಾಗುತ್ತಿರುವುದಕ್ಕೆ ತುಂಬಾ ಹೆಮ್ಮೆ ಎನಿಸುತ್ತದೆ. ಯೋಗ ಸಾಧನೆಯಿಂದ ಮನುಷ್ಯನ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಯೋಧ ರಾಜೀವ್ ನಾಯ್ಕ ಹೇಳಿದರು.
ಪಟ್ಟಣದ ಕೆನರಾ ವೆಲ್ಫೇರ್ ಟ್ರಸ್ಟಿನ ಪಿ.ಎಂ.ಹೈಸ್ಕೂಲ್ ನಲ್ಲಿ ಎನ್.ಸಿ.ಸಿ ಘಟಕದ ವತಿಯಿಂದ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಶಿಕ್ಷಕ ಚಂದ್ರಶೇಖರ್ ಕಡೆಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವುದು ನಿಜವಾಗಿಯೂ ಸಂತಸದ ಕ್ಷಣ. ಅದರ ಜೊತೆಗೆ ಕಳೆದ 10 ವರ್ಷಗಳಿಂದ ಎನ್.ಸಿ.ಸಿ. ಘಟಕವು ಯೋಗ ಶಿಬಿರ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಯೋಗದ ಮಹತ್ವ ತಿಳಿಸುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದರು.
ಯೋಗ ಗುರು ವಿನಾಯಕ ಗುಡಿಗಾರ, ಎನ್.ಸಿ.ಸಿ. ಕೆಡೆಟ್ ಗಳಿಗೆ ಯೋಗದ ಆಯಾಮ ತಿಳಿಸಿದರು.
ಶಿಕ್ಷಕ ಎನ್.ಸಿ.ಸಿ.ಕಮಾಂಡರ್ ಜಿ.ಆರ್.ತಾಂಡೇಲ, ನಿವೃತ್ತ ಶಿಕ್ಷಕರಾದ ಎಂ.ಎಂ.ಕರ್ಕಿಕರ್, ಶಿಕ್ಷಕಿ ನಯನಾ ನಾಯಕ, ಭಾರತೀಯ ಸೇನೆಯ ಯೋಧ ಸುಬೇದಾರ್ ಸತೀಶ್ ಚೌಹಾಣ್ ದಾರಸಿಂಗ್, ಶಿಕ್ಷಕರಾದ ರಾಜೇಶ ನಾಯಕ ಮುಗುದುಮ್ ಅಲಗೋಡಿ, ಎಂಸಿಸಿ ಅಧಿಕಾರಿಗಳಾದ ಗಿರಿಜಾ ತಳವಾರ್, ಮಧುರಾ ಭಟ್, ಜಿ.ಎಸ್.ನಾಯ್ಕ, ರಾಘವೇಂದ್ರ ಮಹಾಲೆ, ಸಾರ್ಜೆಂಟ್ ನಿತಿನ್ ನಾಯ್ಕ, ಅಮಯ್ ಗಿರಫ್, ರಜತ ನಾಯ್ಕ, ಯಜ್ಞೇಶ್, ಕೀರ್ತನಾ ನಾಯ್ಕ ಸೇರಿದಂತೆ ಎನ್.ಸಿ.ಸಿ. ಕೆಡೆಟ್ ಗಳು ಮತ್ತು ವಿದ್ಯಾರ್ಥಿಗಳು ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.