ADVERTISEMENT

ಗೋಕರ್ಣ: ವಟವೃಕ್ಷಕ್ಕೆ ಮಹಿಳೆಯರ ನಮನ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 13:44 IST
Last Updated 10 ಜೂನ್ 2025, 13:44 IST
ಗೋಕರ್ಣದ ಗಾಯತ್ರಿ ಪರ್ವತದ ತಪ್ಪಲಿನಲ್ಲಿರುವ ವಟವೃಕ್ಷಕ್ಕೆ ಪೂಜೆ ಸಲ್ಲಿಸುತ್ತಿರುವ ಸುಮಂಗಲಿಯರು.  
ಗೋಕರ್ಣದ ಗಾಯತ್ರಿ ಪರ್ವತದ ತಪ್ಪಲಿನಲ್ಲಿರುವ ವಟವೃಕ್ಷಕ್ಕೆ ಪೂಜೆ ಸಲ್ಲಿಸುತ್ತಿರುವ ಸುಮಂಗಲಿಯರು.     

ಗೋಕರ್ಣ: ಗೋಕರ್ಣದಲ್ಲಿ ಮಹಿಳೆಯರು ಜ್ಯೇಷ್ಠ ಹುಣ್ಣಿಮೆಯ ದಿನವಾದ ಮಂಗಳವಾರ ಸಂಭ್ರಮದಿಂದ ವಟ ಸಾವಿತ್ರಿ ವ್ರತ ಆಚರಿಸಿದರು.

ಬೆಳಿಗ್ಗೆಯಿಂದಲೇ ವಿವಾಹಿತ ಮಹಿಳೆಯರು 300 ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಗಾಯತ್ರಿ ಪರ್ವತದ ತಪ್ಪಲಿನಲ್ಲಿರುವ ವಟವೃಕ್ಷಕ್ಕೆ ಪೂಜೆ ಸಲ್ಲಿಸಿದರು.

ಕೆಲವು ವೈದಿಕರು ಪೂಜೆ ನಡೆಸಿ ಕೊಟ್ಟರು. ಮಳೆ ಸ್ವಲ್ಪ ಬಿಡುವು ನೀಡಿದ್ದರಿಂದ ಮಹಿಳೆಯರು ಉತ್ಸಾಹದಿಂದ ಪೂಜೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಪರಸ್ಪರ ಅರಿಸಿಣ–ಕುಂಕುಮ ವಿನಿಮಯ ಮಾಡಿಕೊಂಡರು.

ADVERTISEMENT
ಗೋಕರ್ಣದ ಗಾಯತ್ರಿ ಪರ್ವತದ ತಪ್ಪಲಿನಲ್ಲಿರುವ ವಟವೃಕ್ಷಕ್ಕೆ ಪೂಜೆ ಸಲ್ಲಿಸುತ್ತಿರುವ ಸುಮಂಗಲಿಯರು.  
ಗೋಕರ್ಣದ ಗಾಯತ್ರಿ ಪರ್ವತದ ತಪ್ಪಲಿನಲ್ಲಿರುವ ವಟವೃಕ್ಷಕ್ಕೆ ಪೂಜೆ ಸಲ್ಲಿಸುತ್ತಿರುವ ಸುಮಂಗಲಿಯರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.