ADVERTISEMENT

ಕವನಾಗೆ ‘ಹವ್ಯಕ ವಿದ್ಯಾ ರತ್ನ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 14:07 IST
Last Updated 25 ಡಿಸೆಂಬರ್ 2024, 14:07 IST
25-12-24-sdpr-01
25-12-24-sdpr-01   

ಸಿದ್ದಾಪುರ: ಪಟ್ಟಣದ ವಿದ್ಯಾರ್ಥಿನಿ ಡಾ.ಕವನಾ ಹೆಗಡೆ ಬೆಂಗಳೂರಿನ ಎಸ್‍ಡಿಎಂ ಆಯುರ್ವೇದ ಕಾಲೇಜಿನಲ್ಲಿ ಬಿಎಎಂಎಸ್ ಪದವಿಯಲ್ಲಿ ಅತಿ ಹೆಚ್ಚಿನ ಅಂಕ ಪಡೆದು ಚಿನ್ನದ ಪದಕ ಪಡೆದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಡಿ.27 ರಿಂದ ಜರುಗುತ್ತಿರುವ ಮೂರನೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ‘ಹವ್ಯಕ ವಿದ್ಯಾ ರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗುತ್ತಿದೆ.

ಕವನಾ ಮುಖ್ಯಶಿಕ್ಷಕ ಸತೀಶ ಹೆಗಡೆ ಹಾಗೂ ರಶ್ಮಿ ಹೆಗಡೆ ದಂಪತಿಯ ಪುತ್ರಿಯಾಗಿದ್ದು, ಪ್ರಸ್ತುತ ಆಯುರ್ವೇದದಲ್ಲಿ ಎಂ.ಡಿ. ಅಭ್ಯಾಸ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT