ADVERTISEMENT

₹ 1 ಲಕ್ಷ ಮೌಲ್ಯದ ಬೆಲ್ಲದ ಕೊಳೆ ಜಪ್ತಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 7:23 IST
Last Updated 13 ಏಪ್ರಿಲ್ 2019, 7:23 IST
ಕುಮಟಾ ತಾಲ್ಲೂಕಿನ ಕೋಳಿಮಂಜುಗುಣಿ ಗ್ರಾಮದ ದಾಸನಗದ್ದೆಯ ಕಾಡಿನಲ್ಲಿ ಬಚ್ಚಿಡಲಾಗಿದ್ದ ಬೆಲ್ಲದ ಕೊಳೆಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಶುಕ್ರವಾರ ಜಪ್ತಿ ಮಾಡಿದರು
ಕುಮಟಾ ತಾಲ್ಲೂಕಿನ ಕೋಳಿಮಂಜುಗುಣಿ ಗ್ರಾಮದ ದಾಸನಗದ್ದೆಯ ಕಾಡಿನಲ್ಲಿ ಬಚ್ಚಿಡಲಾಗಿದ್ದ ಬೆಲ್ಲದ ಕೊಳೆಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಶುಕ್ರವಾರ ಜಪ್ತಿ ಮಾಡಿದರು   

ಕಾರವಾರ:ಕುಮಟಾ ತಾಲ್ಲೂಕಿನಕೋಳಿಮಂಜುಗುಣಿ ಗ್ರಾಮದ ದಾಸನಗದ್ದೆಯ ಕಾಡಿನಲ್ಲಿ ಬಚ್ಚಿಡಲಾಗಿದ್ದ 2,010 ಲೀಟರ್ ಬೆಲ್ಲದ ಕೊಳೆಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಶುಕ್ರವಾರ ಜಪ್ತಿ ಮಾಡಿದ್ದಾರೆ. ಇದರ ಮೌಲ್ಯ ₹ 1 ಲಕ್ಷ ಎಂದುಅಂದಾಜು ಮಾಡಲಾಗಿದೆ.

ಕಳ್ಳಬಟ್ಟಿ ಸಾರಾಯಿ ತಯಾರಿಸಲು ಬಳಸಲು ಬಳಸುವ ಬೆಲ್ಲದ ಕೊಳೆಯನ್ನು ಡಾಂಬರು ಟ್ಯಾಂಕ್‌ ಹಾಗೂ ಖಾದ್ಯ ತೈಲದ ಡಬ್ಬಗಳಲ್ಲಿ ತುಂಬಿಡಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಚಟುವಟಿಕೆಯನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳಿಗೆ ಶೋಧ ಕಾರ್ಯ ಮುಂದುವರಿದಿದೆ.

ಅಧಿಕಾರಿಗಳ ತಂಡದಲ್ಲಿ ಹೊನ್ನಾವರ ಉ‍ಪವಿಭಾಗದ ಉಪಅಧೀಕ್ಷಕಿ (ಹೆಚ್ಚುವರಿ ಅಧಿಕಾರ) ಸೀಮಾ, ಸಿಬ್ಬಂದಿಅರವಿಂದ, ಹಮೀದ್, ತಳೇಕರ್, ಕೆ.ಟಿ.ನಾಯ್ಕ, ನಾಗೇಶ್ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ದಯಾನಂದ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.