ADVERTISEMENT

ಭಟ್ಕಳದಲ್ಲಿ ಹೆಸರಾದ ‘ವೈಟ್ ವಾಶ್ ಡ್ರೈ ಕ್ಲೀನರ್ಸ್‌’

ಗ್ರಾಹಕರಿಂದ ಬಟ್ಟೆಯ ಸಂಗ್ರಹ, ಸ್ವಚ್ಛತೆ, ಡೆಲಿವರಿ ಸೌಲಭ್ಯ

ದೇವರಾಜ ನಾಯ್ಕ
Published 19 ಜೂನ್ 2019, 19:30 IST
Last Updated 19 ಜೂನ್ 2019, 19:30 IST
ಭಟ್ಕಳದ ನವಾಯತ್ ಕಾಲೊನಿಯಲ್ಲಿರುವ ‘ವೈಟ್ ವಾಶ್ ಡ್ರೈ ಕ್ಲೀನರ್ಸ್‌’ ಮಳಿಗೆ
ಭಟ್ಕಳದ ನವಾಯತ್ ಕಾಲೊನಿಯಲ್ಲಿರುವ ‘ವೈಟ್ ವಾಶ್ ಡ್ರೈ ಕ್ಲೀನರ್ಸ್‌’ ಮಳಿಗೆ   

ಕಾರವಾರ: ಅದೆಷ್ಟೋ ಮಂದಿಗೆ ಬಟ್ಟೆ ತೊಳೆಯುವುದು, ಇಸ್ತ್ರಿ ಮಾಡುವುದು ದೊಡ್ಡ ಸಮಸ್ಯೆ. ಇನ್ನು, ದೋಬಿಗೆ ಕೊಡೋಣವೆಂದರೆ ಕೆಲವರಿಗೆ ಅದಕ್ಕೂ ಕೂಡ ಸಮಯ ಇರುವುದಿಲ್ಲ. ಇಂತಹ ಲಾಂಡ್ರಿಯ ಸಮಸ್ಯೆಗಳಿಗೆ ‘ವೈಟ್ ವಾಶ್ ಡ್ರೈ ಕ್ಲೀನರ್ಸ್‌’ ಪರಿಹಾರ ಒದಗಿಸುತ್ತಿದೆ.

ಭಟ್ಕಳದ ನವಾಯತ್ ಕಾಲೊನಿಯ ಸೈಯದ್ ಹುಸೇನ್ ಅವರ ಈ ಸಣ್ಣ ಉದ್ಯಮ, ತಾಲ್ಲೂಕಿನ ಗ್ರಾಹಕರ ಮನೆಯಿಂದ ಬಟ್ಟೆ ತಂದು ಸ್ವಚ್ಛಗೊಳಿಸಿ, ಅದನ್ನು ಸಮಯಕ್ಕೆ ಸರಿಯಾಗಿ ವಾಪಸ್ ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ.

‘ಭಟ್ಕಳ ತಾಲ್ಲೂಕಿನಲ್ಲಿ ಡ್ರೈ ಕ್ಲೀನಿಂಗ್ ಮಾಡುವ ಯಾವುದೇ ಮಳಿಗೆ ಇಲ್ಲ. ಹೀಗಾಗಿ ಅನೇಕರು ಉಡುಪಿ, ಮಂಗಳೂರಿಗೆ ಕೊಂಡೊಯ್ದು ದುಬಾರಿ ಬೆಲೆಗೆ ಸ್ವಚ್ಛಗೊಳಿಸಿಕೊಂಡು ಬರುತ್ತಾರೆ. ಹೀಗಾಗಿ ಲಾಂಡ್ರಿ ಉದ್ಯಮ ಆರಂಭಿಸಿದರೆ ಜನರಿಗೂ ಉಪಯೋಗವಾಗುತ್ತದೆ ಎಂಬ ಉದ್ದೇಶದಿಂದ ಈ ವರ್ಷದ ಫೆಬ್ರುವರಿಯಲ್ಲಿ ಪ್ರಾರಂಭಿಸಿದೆ. ಸುಮಾರು ₹2 ಲಕ್ಷಕ್ಕೂ ಅಧಿಕ ಬಂಡವಾಳ ಹೂಡಿದ್ದೇನೆ. ಈ ಉದ್ಯಮದಲ್ಲಿ ದಿಢೀರ್ ಆಗಿ ಲಾಭ ಬರುವುದಿಲ್ಲ. ಸ್ವಲ್ಪ ತಾಳ್ಮೆ ಬೇಕು’ ಎನ್ನುತ್ತಾರೆ ಮಾಲೀಕ ಸೈಯದ್ ಹುಸೇನ್.

ADVERTISEMENT

‘ದುಬೈನಲ್ಲಿ ಪೇಂಟಿಂಗ್ ಫ್ಯಾಕ್ಟರಿಯಲ್ಲಿ 10 ವರ್ಷಗಳಿಂದ ಕೆಲಸ ಮಾಡುತ್ತಿದ್ದೆ. ನಂತರ ಊರಿಗೆ ಮರಳಿ ಈ ಉದ್ಯಮ ಆರಂಭಿಸಿದೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಒಮ್ಮೆ 20 ಬಟ್ಟೆಗಳನ್ನು ತೊಳೆಯುವ ಎರಡು ಮಶಿನ್‌ಗಳಿವೆ. ನನ್ನ ಈ ಸಣ್ಣ ಉದ್ಯಮದಿಂದ ಐದಾರು ಮಂದಿಗೆ ಉದ್ಯೋಗವೂ ಸಿಕ್ಕಿದೆ’ ಎಂದು ಅವರು ವಿವರಿಸಿದರು.

‘ಗ್ರಾಹಕರು ಮೊ.ಸಂ: 88677 76678ಗೆ ಕರೆ ಮಾಡಿ, ಅವರಿರುವ ಸ್ಥಳದ ಮಾಹಿತಿ ನೀಡಿದರೆ ಸಾಕು. ನಮ್ಮ ಸಿಬ್ಬಂದಿಗ್ರಾಹಕರುಇರುವಲ್ಲಿಗೇ ಭೇಟಿ ನೀಡಿ ಬಟ್ಟೆಗಳನ್ನು ಪಡೆಯಲಿದ್ದಾರೆ. ತೊಳೆದು, ಇಸ್ತ್ರಿ ಮಾಡಿದ ನಂತರ ಮರಳಿ ಅದೇ ಜಾಗಕ್ಕೆ ತಲುಪಿಸಲಿದ್ದಾರೆ. ಬಿಲ್‌ ಮೊತ್ತ ₹ 350ಕ್ಕಿಂತ ಹೆಚ್ಚಾದರೆ ಡೆಲಿವರಿ ಶುಲ್ಕವಿಲ್ಲ. ಅದಕ್ಕಿಂತಲೂ ಕಡಿಮೆ ಇದ್ದರೆ ₹ 30 ಪಡೆಯಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.