ಹೊನ್ನಾವರ: ತಾಲ್ಲೂಕಿನ ಹೆರಾವಲಿ ಗ್ರಾಮದಲ್ಲಿ ಕಾಡುಹಂದಿಗಳು ಅಸಹಜವಾಗಿ ಸಾಯುತ್ತಿವೆ. ಕಳೆದ ಹತ್ತು ದಿನಗಳಲ್ಲಿ ಐದಕ್ಕೂ ಹೆಚ್ಚು ಕಾಡು ಹಂದಿಗಳು ಮೃತಪಟ್ಟಿದ್ದು, ಗುರುವಾರ ಮತ್ತೊಂದು ಕಳೇಬರ ಪತ್ತೆ ಆಗಿದೆ. ಅವುಗಳ ಸಾವಿಗೆ ‘ಆಹಾರದ ಕೊರತೆ’ಯೇ ಕಾರಣವೆಂದು ವೈದ್ಯರು ತಿಳಿಸಿದ್ದಾರೆ.
‘ಕಾಡುಹಂದಿಗಳ ಮರಣೋತ್ತರ ಪರೀಕ್ಷೆ ನಡೆಸಿ ವೈದ್ಯರು ನೀಡಿದ ವರದಿಯ ಪ್ರಕಾರ, ಆಹಾರದ ಕೊರತೆಯೇ ಸಾವಿಗೆ ಕಾರಣ. ಇದರ ಕುರಿತು ತನಿಖೆ ನಡೆಸಲಾಗುವುದು’ ಎಂದು ವಲಯ ಅರಣ್ಯಾಧಿಕರಿ (ಆರ್‌ಎಫ್ಒ) ಸವಿತಾ ದೇವಾಡಿಗ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗ್ರಾಮದ ವಿವಿಧೆಡೆ ಕಾಡು ಹಂದಿಗಳ ಮೃತದೇಹ ಸಿಗುತ್ತಿವೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಬಹುದು. ಅವು ಕೃಷಿ ಭೂಮಿಗೆ ನುಗ್ಗಿ ಬೆಳೆ, ಸಸಿಗಳನ್ನು ಹಾಳುವ ಮಾಡುವುದು ಸಂಪೂರ್ಣ ನಿಂತಿಲ್ಲ. ಆಹಾರದ ಕೊರತೆಗಿಂತಲೂ ಬೇರೆ ಯಾವುದಾದರೂ ಕಾರಣ ಇರಬಹುದೇ ಎಂಬುದರ ಬಗ್ಗೆ ತನಿಖೆ ಆಗಲಿದೆ’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.