ಕರಡಿ
–ಪ್ರಾತಿನಿಧಿಕ ಚಿತ್ರ
ಯಲ್ಲಾಪುರ: ತಾಲ್ಲೂಕಿನ ಕುಂದರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮಾಡಿಯಲ್ಲಿ ಬುಧವಾರ ರಾತ್ರಿ ಮೂವರು ರೈತರ ಮೇಲೆ ಕರಡಿ ದಾಳಿ ಮಾಡಿದೆ.
ಹೆಮ್ಮಾಡಿಯ ಗಂಗಾಧರ ನಾಗ್ಯಾ ಮಡಿವಾಳ (52), ನಿತ್ಯಾನಂದ ಬಂಗಾರ್ಯ ಗೌಡ ( 52) ಹಾಗೂ ಪಾಂಡುರಂಗ ಗಂಗಾಧರ ಮಡಿವಾಳ (64) ಕರಡಿ ದಾಳಿಗೆ ಒಳಗಾದವರು.
ಹೊಲದಲ್ಲಿ ಕೆಲಸ ಮಾಡಿ ಮನೆಗೆ ಬರುತ್ತಿದ್ದ ವೇಳೆ ಕರಡಿ ದಾಳಿ ಮಾಡಿದೆ. ದಾಳಿಯ ಪರಿಣಾಮ ಇವರಿಗೆ ಚಿಕ್ಕಪುಟ್ಟ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.