ADVERTISEMENT

ಭಟ್ಕಳ ಬಳಿಯ ಚಿತ್ರಾಪುರ ಮಠಕ್ಕೆ ನಟ ಯಶ್ ಭೇಟಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 16:33 IST
Last Updated 15 ಫೆಬ್ರುವರಿ 2024, 16:33 IST
ಭಟ್ಕಳ ತಾಲ್ಲೂಕಿನ ಚಿತ್ರಾಪುರ ಮಠಕ್ಕೆ ಗುರುವಾರ ಭೇಟಿ ನೀಡಿಲು ಬಂದಿದ್ದ ನಟ ಯಶ್ ಕುಟುಂಬ
ಭಟ್ಕಳ ತಾಲ್ಲೂಕಿನ ಚಿತ್ರಾಪುರ ಮಠಕ್ಕೆ ಗುರುವಾರ ಭೇಟಿ ನೀಡಿಲು ಬಂದಿದ್ದ ನಟ ಯಶ್ ಕುಟುಂಬ   

ಭಟ್ಕಳ: ಚಿತ್ರನಟ, ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ತಮ್ಮ ಮಕ್ಕಳೊಂದಿಗೆ ಗುರುವಾರ ಸಂಜೆ ತಾಲ್ಲೂಕಿನ ಪ್ರಸಿದ್ಧ ಚಿತ್ರಾಪುರ ಮಠಕ್ಕೆ ಭೇಟಿ ನೀಡಿದರು.

ಮಠದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಅವರ ದರ್ಶನವನ್ನು ಪಡೆದ ಯಶ್ ದಂಪತಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಸ್ವಾಮೀಜಿಯವರೊಂದಿಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಮಠದ ಆಡಳಿತಾಧಿಕಾರಿ, ಸಿಬ್ಬಂದಿ ಇದ್ದರು.

ADVERTISEMENT

ಯಶ್ ಬಂದಿರುವ ಸುದ್ದಿ ತಿಳಿದ ನೂರಾರು ಅಭಿಮಾನಿಗಳು ಚಿತ್ರಾಪುರ ಮಠದ ಸುತ್ತಲೂ ನೆರೆದಿದ್ದರು. ಅಭಿಮಾನಿಗಳನ್ನು ಕಂಡ ಯಶ್ ಸಂತಸದಿಂದ ಅವರತ್ತ ಕೈಬೀಸಿ ನಗು ಬೀರಿದರು.

ಮಠದ ಅತಿಥಿಗೃಹದಲ್ಲಿಯೇ ಯಶ್ ಕುಟುಂಬ ವಾಸ್ತವ್ಯ ಹೂಡಿದ್ದು, ಶುಕ್ರವಾರ ಬೆಳಿಗ್ಗೆ ಇಲ್ಲಿಂದ ಪ್ರಯಾಣ ಬೆಳೆಸಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.