ಮಹಮ್ಮದ್ ರಫಿಕ್
ಯಲ್ಲಾಪುರ: ತಾಲ್ಲೂಕಿನ ಅರಬೈಲು ಘಟ್ಟದಲ್ಲಿ ಸಂಚರಿಸುತ್ತಿದ್ದ ಸಿಗರೇಟಿನ ಲಾರಿ ಕದ್ದು ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಯಲ್ಲಾಪುರ ಪೊಲೀಸರು ಭಾನುವಾರ ಮತ್ತೊಬ್ಬ ಆರೋಪಿಯನ್ನು ಗುಜರಾತಿನಲ್ಲಿ ಬಂಧಿಸಿದ್ದಾರೆ.
ಮಹಮ್ಮದ್ ರಫಿಕ್ ಬಂಧಿತ ಆರೋಪಿ.
2013ರಲ್ಲಿ ಅರಬೈಲ್‌ದಲ್ಲಿ ಲಾರಿ ಕಳ್ಳತನ ನಡೆದಿತ್ತು. ಸಿಗರೇಟು ಸಾಗಿಸುತ್ತಿದ್ದ ಲಾರಿಯನ್ನು ನಾಲ್ವರು ಸೇರಿ ಅಪಹರಿಸಿದ್ದರು. ಸಿಗರೇಟನ್ನು ಮಾರಾಟ ಮಾಡಿ ಆ ಲಾರಿಯನ್ನು ಸುಟ್ಟು ಸಾಕ್ಷಿ ನಾಶ ಮಾಡಿದ್ದರು. ಕೆಲ ದಿನಗಳ ಹಿಂದೆ ಪೊಲೀಸರು ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ರಾಜೇಂದ್ರ ಸಿಂಗ್ ಎಂಬಾತನನ್ನು ಬಂಧಿಸಿದ್ದರು. ಇದೀಗ ಅದೇ ಪ್ರಕರಣದ ಮತ್ತೊಬ್ಬ ಆರೋಪಿ ಮಹಮದ್ ರಫಿಕ್ ಎಂಬಾತನನ್ನು ಬಂಧಿಸಿದ್ದಾರೆ.
ಗುಜರಾತಿನ ದಾಹೋಡಿನಲ್ಲಿರುವ ಸರಕಾರಿ ವಸಹಾತುವಿನಲ್ಲಿ ಮಹಮದ್ ರಫಿಕ್ ಅವಿತಿದ್ದರು. ಮಾಹಿತಿ ತಿಳಿದ ಪಿಎಸ್‌ಐ ಸಿದ್ದು ಗುಡಿ, ಪೊಲೀಸ್ ಸಿಬ್ಬಂದಿ ಶಫಿ ಶೇಖ್, ಗಿರೀಶ ಲಮಾಣಿ ಹಾಗೂ ಪರಶುರಾಮ ದೊಡ್ಡಮನಿ ಸೇರಿ ಮಹಮದ್ ರಫಿಕ್‌ರನ್ನು ಬಂಧಿಸಿದ್ದಾರೆ.
12 ವರ್ಷಗಳ ಹಿಂದೆಯೇ ಪೊಲೀಸರು ಮಹಮದ್ ರಫಿಕ್‌ನನ್ನು ಹಿಡಿದಿದ್ದರು. ನ್ಯಾಯಾಲಯದಿಂದ ಜಾಮೀನು ಪಡೆದು ಆತ ಪರಾರಿಯಾಗಿದ್ದ. ನಂತರ ಕೋರ್ಟಗೆ ಬಂದಿರಲಿಲ್ಲ. ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.