
ಪ್ರಜಾವಾಣಿ ವಾರ್ತೆ
(ಪ್ರಾತಿನಿಧಿಕ ಚಿತ್ರ)
ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ): ‘ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಗಿಕೊಪ್ಪ ಗ್ರಾಮದಲ್ಲಿ ಗುರುವಾರ ಒಂದು ಇಲಿಜ್ವರ (ಲೆಪ್ಟೊಸ್ಪೈರೋಸಿಸ್) ಪ್ರಕರಣ ವರದಿಯಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ತಿಳಿಸಿದ್ದಾರೆ.
‘ಈ ವರ್ಷ ಒಟ್ಟು 7 ಪ್ರಕರಣಗಳು ವರದಿಯಾಗಿವೆ.ಇದು ಒಂದು ಬ್ಯಾಕ್ಟೀರಿಯಾ ಸೋಂಕು. ಸೋಂಕಿತ ಇಲಿಗಳು ಮತ್ತು ಇತರ ದಂಶಕಗಳ (ರೊಡೆಂಟ್ಸ್) ಮೂತ್ರದ ಮೂಲಕ ಹರಡುತ್ತದೆ. ಜ್ವರ, ತಲೆ ನೋವು, ಸುಸ್ತು, ಮೈ-ಕೈ ನೋವುಗಳಂತಹ ಲಕ್ಷಣಗಳು ಇರುತ್ತದೆ. ಇಂಥ ಲಕ್ಷಣಗಳಿದ್ದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.