
ಯಲ್ಲಾಪುರ: ಪಟ್ಟಣ ಪಂಚಾಯಿತಿಯ ಮತದಾರರ ಪಟ್ಟಿಯನ್ನು ಪರಿಷ್ಕರಿಸುವಂತೆ ಆಗ್ರಹಿಸಿ ಬಿಜೆಪಿ ಯಲ್ಲಾಪುರ ಮಂಡಳದಿಂದ ತಹಶೀಲ್ದಾರ್ ಚಂದ್ರಶೇಖರ ಹೊಸಮನಿ ಮೂಲಕ ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದೆ.
‘ಕಳೆದ ಬಾರಿ ಪಟ್ಟಣ ಪಂಚಾಯಿತಿ ಮತದಾರರ ಪರಿಷ್ಕರಣೆಯಲ್ಲಿ ಅನೇಕ ಲೋಪಗಳು ನಡೆದಿವೆ. ಕೋರ್ಟವಾಡದಲ್ಲಿ ವಾಸಿಸುವ ಮತದಾರರನ್ನು ಅಕ್ಬರ ಗಲ್ಲಿಗೆ, ಸಬಗೇರಿಯ ಮತದಾರರನ್ನು ಶಿವಾಜಿ ನಗರಕ್ಕೆ, ಇಸ್ಲಾಂ ಗಲ್ಲಿಯ ಮತದಾರರನ್ನು ಗೋಪಾಲಕೃಷ್ಣ ನಗರಕ್ಕೆ, ಗ್ರಾಮದೇವಿ ನಗರದ ಮತದಾರರನ್ನು ವಲೀಷಾ ಗಲ್ಲಿಗೆ ಸೇರಿಸಲಾಗಿತ್ತು. ಮತದಾರರ ವಿಗಂಡನೆಯಲ್ಲಿ ರಾಜಕೀಯ ಹಸ್ತಕ್ಷೇಪ ಎದ್ದು ಕಾಣುತ್ತಿತ್ತು’ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಪ್ರಮುಖರಾದ ರಾಮು ನಾಯ್ಕ, ಗೋಪಾಲಕೃಷ್ಣ ಗಾಂವ್ಕರ, ವಿನೋದ ತಳೇಕರ, ದೊಂಡು ಪಾಟೀಲ, ವಿಠ್ಠು ಪಾಂಡ್ರಮೀಸೆ, ಗಜಾನನ ನಾಯ್ಕ, ವಿಶ್ವನಾಥ ಹಳೇಮನೆ, ರವಿ ದೇವಡಿಗ, ಮಂಜುನಾಥ ಹರಿಜನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.