ADVERTISEMENT

ಸಿದ್ದರಾಮೋತ್ಸವಕ್ಕೆ ವಿಜಯನಗರ–ಬಳ್ಳಾರಿಯಿಂದ 398 ಬಸ್‌ 

ಸಾರಿಗೆ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 14:34 IST
Last Updated 2 ಆಗಸ್ಟ್ 2022, 14:34 IST
   

ಹೊಸಪೇಟೆ (ವಿಜಯನಗರ): ದಾವಣಗೆರೆಯಲ್ಲಿ ಬುಧವಾರ (ಆ.3) ನಡೆಯಲಿರುವ ‘ಸಿದ್ದರಾಮೋತ್ಸವ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರಿಗೆ ಅವಳಿ ಜಿಲ್ಲೆಗಳಾದ ವಿಜಯನಗರ–ಬಳ್ಳಾರಿಯಿಂದ 398 ಸಾರಿಗೆ ಸಂಸ್ಥೆಯ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಸಾರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

‘ಬಳ್ಳಾರಿ ವಿಭಾಗದ 447 ಬಸ್‌ಗಳಲ್ಲಿ 198 ಬಸ್‌ಗಳು ಸಿದ್ದರಾಮೋತ್ಸವಕ್ಕೆ ನೀಡಲಾಗಿದೆ. 16 ಬಸ್‌ಗಳು ಕೆಟ್ಟು ಹೋಗಿವೆ. ಇನ್ನು, ವಿಜಯನಗರ ವಿಭಾಗದ 430 ಬಸ್‌ಗಳಲ್ಲಿ 200 ಬಸ್‌ಗಳು ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಒಪ್ಪಂದದ ಮೇರೆಗೆ ಕಳಿಸಲಾಗುತ್ತಿದ್ದು, ಉಳಿದ 230 ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಲಿವೆ’ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಎರಡೂ ಜಿಲ್ಲೆಗಳಿಂದ ಹೆಚ್ಚಿನ ಬಸ್‌ಗಳು ಸಿದ್ದರಾಮೋತ್ಸವಕ್ಕೆ ಹೋಗುತ್ತಿದ್ದು, ಆ. 3,4ರಂದು ಸಾರಿಗೆ ಸೇವೆಯಲ್ಲಿ ವ್ಯತ್ಯಯವಾಗಲಿದ್ದು, ಪ್ರಯಾಣಿಕರು ಸಹಕರಿಸಬೇಕು’ ಎಂದು ಕೋರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.