ADVERTISEMENT

ಮೇ 12ರಿಂದ ಉಚಿತ ಕೃತಕ ಕಾಲು ಜೋಡಣೆ ಶಿಬಿರ

​ಪ್ರಜಾವಾಣಿ ವಾರ್ತೆ
Published 11 ಮೇ 2022, 9:06 IST
Last Updated 11 ಮೇ 2022, 9:06 IST
ಮೇ 12ರಿಂದ ಕೃತಕ ಕಾಲು ಜೋಡಣೆ ಶಿಬಿರ
ಮೇ 12ರಿಂದ ಕೃತಕ ಕಾಲು ಜೋಡಣೆ ಶಿಬಿರ   

ಹೊಸಪೇಟೆ (ವಿಜಯನಗರ): ‘ಅಂಗವಿಕಲರು, ಅಪಘಾತದಲ್ಲಿ ಕಾಲು ಕಳೆದುಕೊಂಡವರಿಗೆ ಉಚಿತವಾಗಿ ಜೈಪುರ ಕೃತಕ ಕಾಲು ಜೋಡಣೆ ಶಿಬಿರ ಗುರುವಾರದಿಂದ (ಮೇ 12) ಶನಿವಾರದ (ಮೇ 14) ವರೆಗೆ ನಗರದ ಸ್ವಾಮಿ ವಿವೇಕಾನಂದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿದೆ’ ಎಂದು ಎಂಎಸ್‌ಪಿಎಲ್‌ ಲಿಮಿಟೆಡ್‌ನ ಸಿಎಸ್‌ಆರ್‌ ವಿಭಾಗದ ಮುಖ್ಯಸ್ಥ ರಮೇಶ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಂಬತ್ತು ವರ್ಷಗಳಿಂದ ಶಿಬಿರ ಆಯೋಜಿಸಲಾಗುತ್ತಿದೆ. 1,916 ಜನ ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ. ಕೋವಿಡ್‌ನಿಂದ ಈ ಹಿಂದಿನ ಎರಡು ವರ್ಷ ಶಿಬಿರ ಸಂಘಟಿಸಿರಲಿಲ್ಲ. ಈ ವರ್ಷದ ಶಿಬಿರಕ್ಕೆ ಈಗಾಗಲೇ 200 ಜನ ಹೆಸರು ನೋಂದಣಿ ಮಾಡಿಸಿದ್ದಾರೆ. ಜೈಪುರದ ಭಗವಾನ್‌ ಮಹಾವೀರ ಅಂಗವಿಕಲರ ಸಹಕಾರ ಸಮಿತಿ ಸಹಭಾಗಿತ್ವದಲ್ಲಿ ಶಿಬಿರ ಏರ್ಪಡಿಸಲಾಗಿದೆ’ ಎಂದು ಮಾಹಿತಿ ಹಂಚಿಕೊಂಡರು.

‘ವಿಜಯನಗರ, ಬಳ್ಳಾರಿ, ಕೊಪ್ಪಳ ಜಿಲ್ಲೆಯ ಜನ ಶಿಬಿರದ ಪ್ರಯೋಜನ ಪಡೆಯಬಹುದು. ಕೃತಕ ಕಾಲು, ಕ್ಯಾಲಿಪರ್ಸ್‌, ವಾಕರ್‌, ಕೈಗೋಲು, ಊರುಗೋಲು ವಿತರಿಸಲಾಗುವುದು. ಅಗತ್ಯ ಇರುವವರಿಗೆ ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಗುವುದು. ಇದರ ಸಂಪೂರ್ಣ ವೆಚ್ಚವನ್ನು ಸಂಸ್ಥೆಯೇ ಭರಿಸಲಿದೆ’ ಎಂದು ತಿಳಿಸಿದರು.

ADVERTISEMENT

‘ಹುಟ್ಟಿನಿಂದ ಕಾಲಿನ ಅಂಗವೈಕಲ್ಯ ಹೊಂದಿದವರು, ಪೋಲಿಯೋ ಪೀಡಿತರು, ಅಪಘಾತದಲ್ಲಿ ಕಳೆದುಕೊಂಡವರು ಶಿಬಿರದ ಪ್ರಯೋಜನ ಪಡೆಯಬಹುದು. ಹೆಸರು ನೋಂದಣಿಗೆ, ಹೆಚ್ಚಿನ ಮಾಹಿತಿಗೆ ಬಿ.ಎಂ. ನಾಗರಾಜ್‌ ಅವರ ಮೊಬೈಲ್‌ ಸಂಖ್ಯೆ 9902500250 ಸಂಪರ್ಕಿಸಬಹುದು’ ಎಂದು ವಿವರಿಸಿದರು.

ಎಂಎಸ್‌ಪಿಎಲ್‌ನ ಬಿ.ಎಂ. ನಾಗರಾಜ್‌, ಶಂಭುಲಿಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.