ADVERTISEMENT

ಬಸವ ಸಂಸ್ಕೃತಿ ಅಭಿಯಾನ–ಭವ್ಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 12:57 IST
Last Updated 7 ಸೆಪ್ಟೆಂಬರ್ 2025, 12:57 IST
   

ಹೊಸಪೇಟೆ (ವಿಜಯನಗರ): ಬಸವಣ್ಣನವರನ್ನು ರಾಜ್ಯ ಸರ್ಕಾರ ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿ ವರ್ಷ ಪೂರೈಸಿರುವ ಪ್ರಯುಕ್ತ ರಾಜ್ಯದಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಆರಂಭವಾಗಿದ್ದು, ಅದರ ಭಾಗವಾಗಿ ಭಾನುವಾರ ಇಲ್ಲಿ ಭವ್ಯ ಮೆರವಣಿಗೆ ನಡೆಯಿತು.

ಲಿಂಗಾಯತ ಧರ್ಮಗ್ರಂಥ ವಚನ ಸಾಹಿತ್ಯದ ಕಟ್ಟುಗಳನ್ನು ತಲೆಮೇಲೆ ಹೊತ್ತುಕೊಂಡು ಸಾಗಿದ ಮೆರವಣಿಗೆ ಪುನೀತ್ ರಾಜ್‌ಕುಮಾರ್ ವೃತ್ತದಿಂದ ಆರಂಭಗೊಂಡು ಸುಮಾರು ಎರಡು ಕಿ.ಮೀ.ದೂರದ ಬಸವೇಶ್ವರ ವೃತ್ತದವರೆಗೆ ಸಾಗಿತು. ಹೊಸಪೇಟೆ ಬಸವ ಬಳಗ ಮತ್ತು ಇಷ್ಟಲಿಂಗ ಅಧ್ಯಯನ ಕೇಂದ್ರದ ಮಕ್ಕಳು ಹಾಗೂ ಕಲಾವಿದರಿಂದ ವಚನ ಗಾಯದ ಝೇಂಕಾರ, ವಚನ ನೃತ್ಯದ ವಯ್ಯಾರಗಳೊಂದಿಗೆ ಮೆರವಣಿಗೆ ನಗರದ ಜನರ ಗಮನ ಸೆಳೆಯಿತು.

ರಾಜ್ಯದ ವಿವಿಧ ಭಾಗಗಳಿಂದ ಬಂದ 20ಕ್ಕೂ ಅಧಿಕ ಮಠಾಧೀಶರ ನೇತೃತ್ವದಲ್ಲಿ ನಡೆದ ಈ ಮೆರವಣಿಗೆಯ ಮುಂಚೂಣಿಯಲ್ಲಿ ಬಸವಜ್ಯೊತಿ ರಥ ಹಾಗೂ ವಿವಿಧ ವಚನಕಾರರ ವೇಷಭೂಷಣ ತೊಟ್ಟ ಮಕ್ಕಳನ್ನು ಹೊತ್ತಿದ್ದ ವಾಹನ ಇತ್ತು. ಉದ್ದಕ್ಕೂ ಕೇಳಿಸಿದ ಶಂಖನಾದ ವಿಶೇಷ ಕಳೆ ತರಿಸಿತು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.