ADVERTISEMENT

ಹೊಸಪೇಟೆ | ಬಿಡಿಸಿಸಿ: ನವೀಕೃತ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 4:06 IST
Last Updated 11 ಅಕ್ಟೋಬರ್ 2025, 4:06 IST
ಹೊಸಪೇಟೆಯಲ್ಲಿ ಶುಕ್ರವಾರ ಬಿಡಿಸಿಸಿ ಬ್ಯಾಂಕ್‍ನ ಎಪಿಎಂಸಿ ಶಾಖೆಯ ನವೀಕೃತ ಕಟ್ಟಡವನ್ನು ಉದ್ಘಾಟಿಸಲಾಯಿತು
ಹೊಸಪೇಟೆಯಲ್ಲಿ ಶುಕ್ರವಾರ ಬಿಡಿಸಿಸಿ ಬ್ಯಾಂಕ್‍ನ ಎಪಿಎಂಸಿ ಶಾಖೆಯ ನವೀಕೃತ ಕಟ್ಟಡವನ್ನು ಉದ್ಘಾಟಿಸಲಾಯಿತು   

ಹೊಸಪೇಟೆ (ವಿಜಯನಗರ): ನಗರದಲ್ಲಿ ಶುಕ್ರವಾರ ಬಿಡಿಸಿಸಿ ಬ್ಯಾಂಕ್‍ನ ಎಪಿಎಂಸಿ ಶಾಖೆಯ ನವೀಕೃತ ಕಟ್ಟಡವನ್ನು ಬ್ಯಾಂಕಿನ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಉದ್ಘಾಟಿಸಿದರು.

ನಂತರ ಮಾತನಾಡಿ, ‘ಎಪಿಎಂಸಿ ಶಾಖೆಯಲ್ಲಿ ತಾಲ್ಲೂಕಿನ ಅತಿ ಹೆಚ್ಚು ಶಿಕ್ಷಕರು ವ್ಯವಹರಿಸುತ್ತಿದ್ದು, ಶಿಕ್ಷಕರ ಶಾಖೆ ಎಂದೇ ಹೆಸರಾಗಿದೆ. ಶಾಖೆಗೆ ಬಂದು ವ್ಯವಹರಿಸುವ ಗ್ರಾಹಕರು ಹಾಗೂ ಸಿಬ್ಬಂದಿಗೆ ಅನುಕೂಲವಾಗುವ ವಿನ್ಯಾಸದಲ್ಲಿ ಕಟ್ಟಡವನ್ನು ನವೀಕರಣಗೊಳಿಸಿದೆ’ ಎಂದು ತಿಳಿಸಿದರು.

ಉಪಾಧ್ಯಕ್ಷ ಐ. ದಾರುಕೇಶ್, ನಿರ್ದೇಶಕರಾದ ಚೊಕ್ಕ ಬಸವನಗೌಡ, ಟಿ.ಎಂ. ಚಂದ್ರಯ್ಯಸ್ವಾಮಿ, ಎಲ್.ಎಸ್. ಆನಂದ, ಚಿದಾನಂದ ಐಗೋಳ, ಪಿ.ಮೂಕಯ್ಯಸ್ವಾಮಿ, ವೈ.ಅಣ್ಣಪ್ಪ, ನವೀನ್‍ಕುಮಾರ್ ರೆಡ್ಡಿ, ಹುಲುಗಪ್ಪ ನಾಯಕರ, ಜೆ.ಎಂ. ಶಿವಪ್ರಸಾದ್, ವಿ.ಆರ್. ಸಂದೀಪ್‍ಸಿಂಗ್, ಅಕ್ಕಿ ಬಸವರಾಜಪ್ಪ, ವೀರಭದ್ರಯ್ಯ, ಬಿ.ಜಯಪ್ರಕಾಶ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.