ADVERTISEMENT

ಬೀದಿನಾಟಕ, ಜಾನಪದ ಸಂಗೀತ ತಂಡಗಳಿಂದ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 6:18 IST
Last Updated 8 ಜುಲೈ 2025, 6:18 IST

ಹೊಸಪೇಟೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಯೋಜನೆಗಳನ್ನು ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳ ಮೂಲಕ ಪ್ರಚಾರ ಮಾಡಲು ಕಲಾ ತಂಡಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಕಲಾ ತಂಡಗಳ ಆಯ್ಕೆ ಮಾಡಲು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದ್ದು, ಆಗಸ್ಟ್ 12ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯದ ಎಲ್ಲೆಡೆಯಂತೆ ನಗರದಲ್ಲೂ ಏಕಕಾಲಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕಲಾತಂಡಗಳನ್ನು 10 ಅಂಕ ಅನುಭವ, 10 ಅಂಕ ಕಲೆಯ ಅಭಿವ್ಯಕ್ತಿಗೆ, ಸಂಗೀತಕ್ಕೆ 10 ಅಂಕಗಳು ಮತ್ತು ಸೃಜನಶೀಲನತೆ ಹಾಗೂ ಪ್ರಸ್ತುತಪಡಿಸುವಿಕೆಗೆ 10 ಅಂಕಗಳನ್ನು ನೀಡುವ ಮೂಲಕ ಆಯ್ಕೆ ಮಾಡಲಾಗುತ್ತದೆ.

ಜಿಲ್ಲೆಯ ಅರ್ಹ ಕಲಾ ತಂಡಗಳು ನಿಗದಿತ ಅರ್ಜಿ ನಮೂನೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಆಗಸ್ಟ್ 5ರೊಳಗಾಗಿ ಸಲ್ಲಿಸಬೇಕೆಂದು ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಧನಂಜಯಪ್ಪ.ಬಿ. ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.