ಹೊಸಪೇಟೆ (ವಿಜಯನಗರ): ಧಾರವಾಡದ ಹಿರಿಯ ಸಾಹಿತಿ ದಿ. ಗುರುಲಿಂಗ ಕಾಪಸೆ ಅವರು ಸಂಗ್ರಹಿಸಿದ್ದ 8,000 ಪುಸ್ತಕಗಳನ್ನು ಅವರ ಮಕ್ಕಳು ಹಂಪಿ ಕನ್ನಡ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ದೇಣಿಗೆಯಾಗಿ ನೀಡಿದ್ದಾರೆ.
‘ಬೆಂಗಳೂರಿನಲ್ಲಿ ವಾಸವಾಗಿರುವ ಕಾಪಸೆ ಅವರ ಪುತ್ರ ಚಂದ್ರಶೇಖರ ಕಾಪಸೆ ಮತ್ತು ವಿದೇಶದಲ್ಲಿರುವ ಪುತ್ರಿ ಉಚಿತವಾಗಿ ಹಂಪಿ ವಿ.ವಿಗೆ ನೀಡಿದ್ದಾರೆ’ ಎಂದು ವಿ.ವಿ. ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ ಶುಕ್ರವಾರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಧಾರವಾಡ ಆಕಾಶವಾಣಿಯ ನಿವೃತ್ತ ಅಧಿಕಾರಿ ಬಸವರಾಜ ಸಾದರ ಅವರು ಇದಕ್ಕೆ ಕಾರಣ. ವಿಶ್ವವಿದ್ಯಾಲಯದ ಗ್ರಂಥಾಲಯದ ಸಿಬ್ಬಂದಿ ಗುಡಿಮನಿ ಹಾಗೂ ಇತರರು ಧಾರವಾಡಕ್ಕೆ ತೆರಳಿ ಗ್ರಂಥಗಳನ್ನು ತಂದಿದ್ದಾರೆ. ಇದು ಸಾಹಿತ್ಯ ವಲಯದಲ್ಲಿ ಮಾದರಿ ಕಾರ್ಯವಾಗಿದೆ’ ಎಂದು ಅವರು ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಗ್ರಂಥಾಲಯ ಸೇರಿದ ಅಮೂಲ್ಯ ಪುಸ್ತಕಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.