ಸಾವು (ಪ್ರಾತಿನಿಧಿಕ ಚಿತ್ರ)
ಕೂಡ್ಲಿಗಿ (ವಿಜಯನಗರ ಜಿಲ್ಲೆ): ಟ್ರ್ಯಾಕ್ಟರ್‌ನ ರೂಟರ್‌ಗೆ ಸಿಲುಕಿ ಬಾಲಕ ನವದೀಪ (5) ಮೃತಪಟ್ಟ ಘಟನೆ ತಾಲ್ಲೂಕಿನ ಗುಡೇಕೋಟೆ ಗ್ರಾಮದಲ್ಲಿ ಶನಿವಾರ ನಡೆದಿದೆ.
ಮೋಳಕಾಲ್ಮೂರು ತಾಲ್ಲೂಕಿನ ಕೆಳಗಳಹಟ್ಟಿ ಗ್ರಾಮದ ಓಬಣ್ಣ ಅವರ ಮಗ ನವದೀಪ್ ಗುಡೇಕೋಟೆಯ ತನ್ನ ತಾಯಿಯ ತವರು ಮನೆಯಲ್ಲಿದ್ದ. ಶನಿವಾರ ಓಬಣ್ಣನ ಮಾವ ಮಾರಣ್ಣ ಅವರು ಗುಡೇಕೋಟೆ ಗ್ರಾಮದ ಖಾಸೀಂಪೀರಾ ಸಾಬ್ ಅವರ ಹೊಲದಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡುವ ಸಂದರ್ಭದಲ್ಲಿ ನವದೀಪ್‍ನನ್ನು ಪಕ್ಕದಲ್ಲಿ ಕೂರಿಸಿಕೊಂಡಿದ್ದರು. ಅವರು ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದರಿಂದ ಬಾಲಕ ಆಯ ತಪ್ಪಿ ಕೆಳಗೆ ಬಿದ್ದ. ಆಗ ಟ್ರ್ಯಾಕ್ಟರ್‌ನ ರೂಟರ್ ಮತ್ತು ಬಾಲಕನ ತಲೆಗೆ ಮತ್ತು ಕಾಲಿಗೆ ಬಡಿದು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಬಾಲಕನ ತಂದೆ ನೀಡಿದ ದೂರಿನಂತೆ ಗುಡೇಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.