ಹೊಸಪೇಟೆ (ವಿಜಯನಗರ): ನಗರದ ಸೇವಿಯರ್ ಅಂಗವಿಕಲರ ಸೇವಾ ಸಮಿತಿಯ ಸಹಯೋಗದಲ್ಲಿ ರೋಟರಿ ಕ್ಲಬ್ ಜೂನ್ 13ರಿಂದ 15ರವರೆಗೆ ನಾಲ್ಕನೇ ರಾಜ್ಯಮಟ್ಟದ ಅಂಧರ ಮುಕ್ತ ಚೆಸ್ ಟೂರ್ನಿಯನ್ನು ಇಲ್ಲಿನ ರೋಟರಿ ಸಭಾಂಗಣದಲ್ಲಿ ಆಯೋಜಿಸಿದೆ. 180 ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.
‘ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಮೊದಲ 20 ಸ್ಥಾನ ಗಳಿಸಿದವರಿಗೆ ನಗದು ಬಹುಮಾನ ಇದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೇರೆಲ್ಲೂ ಇಂತಹ ಟೂರ್ನಿ ನಡೆಯುತ್ತಿಲ್ಲ. ಮುಂದಿನ ಟೂರ್ನಿಗೆ ‘ಫಿಡೆ’ ಮಾನ್ಯತೆ ಸಿಗುವ ನಿರೀಕ್ಷೆಯಿದೆ’ ಎಂದು ಸೇವಾ ಸಮಿತಿಯ ಸಂಸ್ಥಾಪಕ ಕಾರ್ಯದರ್ಶಿ ಡಿ.ಎನ್.ಸಂತೋಷ್ ಕುಮಾರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರೋಟರಿ ಅಧ್ಯಕ್ಷ ದೀಪಕ್, ಸಮಿತಿಯ ಬಾಲರಾಜ್, ಸಾವಿತ್ರಿ, ಅಕ್ಷತಾ, ದೀಪಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.