ADVERTISEMENT

‘ಪೂರ್ಣ ಲಾಕ್‌ಡೌನ್ ಕಾನೂನು ಬಾಹಿರ’-ಅಖಿಲ ಭಾರತ ವಕೀಲರ ಸಂಘ

​ಪ್ರಜಾವಾಣಿ ವಾರ್ತೆ
Published 21 ಮೇ 2021, 14:46 IST
Last Updated 21 ಮೇ 2021, 14:46 IST

ಹೊಸಪೇಟೆ(ವಿಜಯನಗರ): ‘ಕೋವಿಡ್–19 ಹರಡುವುದು ತಡೆಯಲು ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಮಾಡಿ ಜನಸಂಚಾರ ನಿರ್ಬಂಧಿಸಿರುವುದು ಕಾನೂನು ಬಾಹಿರವಾಗಿದೆ. ತಕ್ಷಣವೇ ಅದನ್ನು ಹಿಂಪಡೆಯಬೇಕು’ ಎಂದು ಅಖಿಲ ಭಾರತ ವಕೀಲರ ಸಂಘದ ಜಿಲ್ಲಾ ಮುಖಂಡರಾದ ಎ. ಕರುಣಾನಿಧಿ, ಕೆ.ಸಿ. ಶರಣಪ್ಪ, ಕೆ. ಪ್ರಹ್ಲಾದ್‌ ಆಗ್ರಹಿಸಿದ್ದಾರೆ.

‘ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯ ಅಡಿಯಲ್ಲಿ ಜನ ಸಂಚಾರವನ್ನು ನಿಯಂತ್ರಣ ಮಾಡಲು ಮಾತ್ರ ಅವಕಾಶ ಇದೆಯೇ ಹೊರತು ನಿರ್ಬಂಧಿಸಲು ಇಲ್ಲ. ಆದರೂ ಜಿಲ್ಲಾಡಳಿತವು ಜನ ಸಂಚಾರವನ್ನು ಸಂಪೂರ್ಣ ನಿರ್ಬಂಧ ಮಾಡಿರುವುದು ಸಾಂವಿಧಾನಿಕ ಹಾಗೂ ಪ್ರಜಾಸತ್ತಾತ್ಮಕ ಹಕ್ಕುಗಳ ಕಗ್ಗೊಲೆಯಾಗಿದೆ’ ಎಂದು ಆರೋಪಿಸಿದ್ದಾರೆ.

‘ಕೊರೊನಾ ನಿಯಂತ್ರಣ ಕೇವಲ ಆಡಳಿತದ ಪ್ರಶ್ನೆಯಾಗಿ ನೋಡದೇ ರೋಗಿಗಳಿಗೆ ಆತ್ಮಸ್ಥೈರ್ಯ ಹಾಗೂ ಮನೋಬಲವನ್ನು ತುಂಬುವ ಕೆಲಸವಾಗಬೇಕು. ಕೋವಿಡ್‌ ಬಿಕ್ಕಟ್ಟು ಪರಿಹಾರಕ್ಕೆ ಲಾಕ್‌ಡೌನ್‌ ಒಂದೇ ಪರಿಹಾರವಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.