ADVERTISEMENT

‘ಪುರಾಣ, ಇತಿಹಾಸದ ಮಿಶ್ರಣದಿಂದ ಗೊಂದಲ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 12:31 IST
Last Updated 23 ಮಾರ್ಚ್ 2022, 12:31 IST
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಎ. ಸುಬ್ಬಣ್ಣ ರೈ ಮಾತನಾಡಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಎ. ಸುಬ್ಬಣ್ಣ ರೈ ಮಾತನಾಡಿದರು   

ಹೊಸಪೇಟೆ (ವಿಜಯನಗರ): ‘ಪುರಾಣ ಮತ್ತು ಇತಿಹಾಸದ ಮಿಶ್ರಣದಿಂದ ಗೊಂದಲಕ್ಕೆ ಎಡೆ ಮಾಡಿಕೊಡುತ್ತಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಜ್ಞಾನ ನಿಕಾಯದ ಡೀನ್‌ ಮಾಧವ ಪೆರಾಜೆ ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ‘ವಿಜಯನಗರ ಸಂಶೋಧನೆ; ಸಾಧ್ಯತೆ ಮತ್ತು ಸವಾಲುಗಳು’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸದಲ್ಲಿ ಬದುಕಿನ ಚಲನೆ ಕಂಡುಬರುವುದಿಲ್ಲ. ಇತಿಹಾಸಕ್ಕೆ ಮುಖ್ಯವಾಗಿ ಆಧಾರಗಳು ಬೇಕು. ಭಾರತೀಯ ಸಂಸ್ಕೃತಿಯಲ್ಲಿ ಹೆಚ್ಚಾಗಿ ಐತಿಹ್ಯವನ್ನು ಕಾಣಬಹುದು’ ಎಂದರು.

‘ಯಾವುದೇ ಕಾಲಘಟ್ಟದ ಇತಿಹಾಸ ರಚನೆಯು ಪ್ರಭುತ್ವ, ಧರ್ಮ, ಅಭಿಮಾನಗಳ ಪ್ರಭಾವಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಒಳಪಟ್ಟಿದೆ. ಪ್ರಸ್ತುತ ದಿನಗಳಲ್ಲಿ ಇತಿಹಾಸವು ಸಮಾಜ-ವಿಜ್ಞಾನಗಳ ಶಾಖೆಯ ಹಲವಾರು ನಿಯಮಗಳನ್ನು ಅಳವಡಿಸಿಕೊಂಡು ಸಾರ್ವಕಾಲಿಕ ಸತ್ಯದಿಂದ ಸಾಧಾರಣ ತತ್ವವನ್ನು ರೂಪಿಸ ಹೊರಟಿದೆ’ ಎಂದು ತಿಳಿಸಿದರು.

ADVERTISEMENT

ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ, ಸ್ಥಳೀಯ ಚರಿತ್ರೆಯಲ್ಲಿ ಮೌಖಿಕ ಪರಂಪರೆ ಮುಖ್ಯ. ಬಹುಶಿಸ್ತೀಯ ನೆಲೆಯಲ್ಲಿ ಬರವಣಿಗೆಯು ನಡೆಯಬೇಕಾಗಿದೆ. ಕಾವ್ಯ, ಕಾದಂಬರಿ ಬರವಣಿಗೆಯ ಕ್ರಮಕ್ಕೂ ಮತ್ತು ಇತಿಹಾಸದ ಬರವಣಿಗೆಯ ಕ್ರಮಕ್ಕೂ ಸಾಕಷ್ಟು ವ್ಯತ್ಯಾಸ ಕಾಣಬಹುದು ಎಂದರು.

ರಾಜ್ಯ ಪತ್ರಗಾರ ನಿರ್ದೇಶನಾಲಯದ ಉಪನಿರ್ದೇಶಕ ನೆಲ್ಕಂದ್ರ ಸದಾನಂದಪ್ಪ, ಇದುವರೆಗೂ ನಾವು ಗ್ರಹಿಸಿಕೊಂಡಿರುವ, ಗ್ರಹಿಸಬೇಕಾದ ಮತ್ತು ಪ್ರಸ್ತುತ ವಿಷಯಗಳನ್ನು ಚರ್ಚೆಗೆ ಒಳಪಡಿಸಿದಾಗ ಮಾತ್ರ ವಸ್ತುನಿಷ್ಠ ಚರಿತ್ರೆಯನ್ನು ಕಟ್ಟಲು ಸಾಧ್ಯ ಎಂದು ಹೇಳಿದರು.

ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥ ಎಸ್.ವೈ. ಸೋಮಶೇಖರ್, ಪ್ರಾಧ್ಯಾಪಕ ರಮೇಶ ನಾಯಕ, ಸಂಶೋಧನಾ ವಿದ್ಯಾರ್ಥಿನಿ ಶ್ವೇತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.