ಹರಪನಹಳ್ಳಿ: ಅನೈತಿಕ ಸಂಬಂಧದ ಶಂಕೆಯಿಂದ ಪತ್ನಿಯನ್ನು ಹೊಡೆದು ಕೊಲೆ ಮಾಡಿದ ಘಟನೆ ಪಟ್ಟಣದ ಹುಲ್ಲುಗರಡಿಕೇರಿಯಲ್ಲಿ ಶನಿವಾರ ಜರುಗಿದೆ.
ನಿಂಗಮ್ಮ (32) ಮೃತರು. ಪತಿ ಆಲೂರು ಸಣ್ಣಚೌಡಪ್ಪ ಆರೋಪಿ. ಆರೋಪಿ ಪಾಲಿಗೆ ಬಂದಿದ್ದ ಕಣದ ಜಾಗ ಮಾರಾಟ ಮಾಡಲು ಪತ್ನಿ ನಿಂಗಮ್ಮ ವಿರೋಧಿಸಿದ್ದರು. ತನ್ನ ಪತಿ ಕೂಲಿ ಕೆಲಸಕ್ಕೆ ಹೋಗುತ್ತಿಲ್ಲ ಎಂದು ಆಗಾಗ ಜಗಳ ಮಾಡುತ್ತಿದ್ದರು. ಇದರಿಂದ ಬೇಸತ್ತ ಸಣ್ಣ ಚೌಡಪ್ಪ ಪತ್ನಿಯನ್ನು ಹೊಡೆದು, ನೇಣು ಬಿಗಿದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಹರಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.