ಹೂವಿನಹಡಗಲಿ: ಈರುಳ್ಳಿಗೆ ನಿಶ್ಚಿತ ಬೆಲೆ ದೊರೆಯದೇ ರೈತರು ನಷ್ಟ ಅನುಭವಿಸುತ್ತಿದ್ದು, ಸರ್ಕಾರ ರಾಜ್ಯದಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಬೆಂಬಲ ಬೆಲೆ ಯೋಜನೆಯಡಿ ಈರುಳ್ಳಿ ಖರೀದಿಸಬೇಕು ಎಂದು ಈರುಳ್ಳಿ ಬೆಳೆಗಾರರ ಸಂಘ ಆಗ್ರಹಿಸಿದೆ.
ಸಂಘದ ಪದಾಧಿಕಾರಿಗಳು ಗುರುವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ಉಪ ತಹಶೀಲ್ದಾರ್ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು.
‘ಈರುಳ್ಳಿಗೆ ಮಾರುಕಟ್ಟೆಯಲ್ಲಿ ಸ್ಥಿರ ಬೆಲೆ ಸಿಗುವುದಿಲ್ಲ. ಒಮ್ಮೆ ಕೊಂಚ ಬೆಲೆ ಏರಿಕೆಯಾದರೆ, ಮತ್ತೊಮ್ಮೆ ಕುಸಿಯುತ್ತದೆ. ರೈತರ ಸಂದಿಗ್ದ ಸ್ಥಿತಿಯ ಲಾಭ ಪಡೆದು ಮಧ್ಯವರ್ತಿಗಳು ಶ್ರೀಮಂತರಾಗುತ್ತಿದ್ದಾರೆ. ಕೇಂದ್ರ ಸರ್ಕಾರ ನಾಫೆಡ್ ಮೂಲಕ ರೈತರಿಂದ ನೇರವಾಗಿ ಈರುಳ್ಳಿ ಖರೀದಿಸಬೇಕು’ ಎಂದು ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಎಂ.ಸಿದ್ದೇಶ್ ಆಗ್ರಹಿಸಿದರು.
ಪದಾಧಿಕಾರಿಗಳಾದ ಸಿ.ಶರಣಪ್ಪ, ಹರ್ತಿ ಪ್ರಕಾಶ, ಸಿ.ಕೊಟ್ರೇಶ, ಸುರೇಶ ಮಲ್ಕಿಒಡೆಯರ್, ತಿಗರಿ ನಾಗರಾಜ, ಜಾತಪ್ಪ, ಸಿ.ಪ್ರಕಾಶ, ಎನ್.ಎಂ.ಪ್ರಶಾಂತ, ಭದ್ರಗೌಡ, ಬಸವರಾಜ, ಎನ್.ಎಂ.ಮಹೇಂದ್ರ, ಮಹೇಶ, ವೀರೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.