
ಪ್ರಜಾವಾಣಿ ವಾರ್ತೆ
ಭೂಕಂಪ
ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಗಡಿ ಭಾಗದಲ್ಲಿ ಶನಿವಾರ ಸಂಜೆ ಭೂಕಂಪನದ ಅನುಭವವಾಗಿದ್ದು, ಜನ ಆತಂಕಗೊಂಡಿದ್ದಾರೆ.
ಸಂಜೆ 7.10ರ ಸುಮಾರಿಗೆ ಗಡಿ ಗ್ರಾಮ ಟಿ.ಕಲ್ಲಹಳ್ಳಿ, ಚಳ್ಳಕೆರೆ ತಾಲ್ಲೂಕಿನ ಟಿ.ಕೋಲಮ್ಮನಹಳ್ಳಿ ಸೇರಿದಂತೆ ಜಗಳೂರು ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಭಾರಿ ಶಬ್ದದೊಂದಿಗೆ ಭೂಮಿ ನಡುಗಿದ ಅನುಭವ ಜನರಿಗೆ ಅಗಿದೆ. ಕೆಲ ಗ್ರಾಮಗಳಲ್ಲಿ ಮನೆಯಲ್ಲಿನ ವಸ್ತುಗಳು ಅಲುಗಾಡಿವೆ ಎಂದು ಟಿ. ಕಲ್ಲಹಳ್ಳಿಯ ಪರ್ವತಯ್ಯ, ಟಿ. ಕೋಲಮ್ಮನಹಳ್ಳಿಯ ವಸಂತ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.