
ಹೊಸಪೇಟೆ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು. ಸಂಡೂರು ಶಿಕ್ಷಣ ಕೇಂದ್ರವು ಶಿಕ್ಷಣದ ಜೊತೆ ಜೊತೆಗೆ ಉತ್ತಮ ರೀತಿಯ ಸಂಸ್ಕಾರ, ಸಂಸ್ಕೃತಿಯನ್ನು ನೀಡುವುದರಲ್ಲಿ ಹೆಸರುವಾಸಿಯಾಗಿದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ಅವರು ಶನಿವಾರ ರಾಯರಕೆರೆಯಲ್ಲಿರುವ ಸಂಡೂರು ಶಿಕ್ಷಣ ಸಂಸ್ಥೆ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಸಂಸ್ಥಾಪಕರಾದ ಎಂ.ವೈ. ಘೋರ್ಪಡೆಯವರು ರಾಜಕಾರಣಿಯಷ್ಟೇ ಅಲ್ಲ, ಬಳ್ಳಾರಿ ಮತ್ತು ವಿಜಯನಗರ ಕ್ಷೇತ್ರಗಳನ್ನು ಹಸಿರುಮಯ ಮಾಡುವಲ್ಲಿ ಶ್ರಮಿಸಿದವರು ಎಂದರು.
ಸಂಸ್ಥೆಯ ಮುಖ್ಯಸ್ಥರಾದ ಯಶೋಧರಾದೇವಿ ಘೋರ್ಪಡೆ ಅಧ್ಯಕ್ಷತೆ ವಹಿಸಿದ್ದರು. ಉಪನಿಷತ್‌ನ ಮಾತು ತಮಸೋಮಾ ಜೋತಿರ್ಗಮಯ ಎಂಬುದು ಇಂದಿಗೂ ಪ್ರಸ್ತುತ ಎಂದರು.
ಬೆಳಕಿಗೆ ಸಂಬಂಧಿಸಿದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು. ಪ್ರಾಂಶುಪಾಲೆ ಚಂದ್ರಿಕಾ ಆನಂದ, ಶಿಕ್ಷಕ ವಿಶ್ವನಾಥ ಭಟ್ಟ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.