ADVERTISEMENT

ಕಾನಹೊಸಹಳ್ಳಿ: ಪ್ರಜಾವಾಣಿ ಹೆಸರೇಳಿಕೊಂಡು ಚುನಾವಣೆ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 13:35 IST
Last Updated 18 ಮಾರ್ಚ್ 2023, 13:35 IST
ಪ್ರಜಾವಾಣಿ ಹೆಸರಲ್ಲಿ ಚುನಾವಣೆ ಸಮೀಕ್ಷೆ ನಡೆಸಿದ ವ್ಯಕ್ತಿ
ಪ್ರಜಾವಾಣಿ ಹೆಸರಲ್ಲಿ ಚುನಾವಣೆ ಸಮೀಕ್ಷೆ ನಡೆಸಿದ ವ್ಯಕ್ತಿ   

ಕಾನಹೊಸಹಳ್ಳಿ (ವಿಜಯನಗರ ಜಿಲ್ಲೆ): ಸಮೀಪದ ನಿಂಬಳಗೇರೆಯಲ್ಲಿ ‘ಪ್ರಜಾವಾಣಿ’ ಪತ್ರಿಕೆಯ ಹೆಸರು ಹೇಳಿಕೊಂಡು ಇಬ್ಬರು ಅಪರಿಚಿತರು ಶನಿವಾರ ಚುನಾವಣೆ ಸಮೀಕ್ಷೆ ನಡೆಸಿದ್ದಾರೆ.

‘ನಾವು ಪ್ರಜಾವಾಣಿ ಪತ್ರಿಕೆಯಿಂದ ಚುನಾವಣಾ ಸಮೀಕ್ಷೆ ನಡೆಸುತ್ತಿದ್ದೇವೆ. ದಾವಣಗೆರೆಯಿಂದ ಬಂದಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ. ಅನುಮಾನಗೊಂಡ ಗ್ರಾಮಸ್ಥರಾದ ಗುರುಪ್ರಸಾದ್, ಸಂತೋಷ್ ಅವರು, ಗುರುತಿನ ಚೀಟಿ ಕೇಳಿ, ‘ಪ್ರಜಾವಾಣಿ’ ಪ್ರತಿನಿಧಿಗೆ ಕರೆ ಮಾಡಿದಾಗ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.