ADVERTISEMENT

ರಿಚಾರ್ಜ್‌ ದರ ಹೆಚ್ಚಳ ವಿರೋಧಿಸಿ ಇಮೇಲ್‌ ಚಳವಳಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 13:56 IST
Last Updated 31 ಜನವರಿ 2022, 13:56 IST
ಆಲ್‌ ಇಂಡಿಯಾ ಡೆಮೊಕ್ರಟಿಕ್‌ ಯುತ್‌ ಆರ್ಗನೈಜೇಶನ್‌ ಹಾಗೂ ಸ್ಟೂಡೆಂಟ್ಸ್‌ ಆರ್ಗನೈಜೇಶನ್‌ನಿಂದ ಸೋಮವಾರ ಹೊಸಪೇಟೆಯ ವಾಲ್ಮೀಕಿ ಐಟಿಐನಲ್ಲಿ ಸಾಮೂಹಿಕ ಇಮೇಲ್‌ ಚಳವಳಿ ಹಮ್ಮಿಕೊಳ್ಳಲಾಗಿತ್ತು
ಆಲ್‌ ಇಂಡಿಯಾ ಡೆಮೊಕ್ರಟಿಕ್‌ ಯುತ್‌ ಆರ್ಗನೈಜೇಶನ್‌ ಹಾಗೂ ಸ್ಟೂಡೆಂಟ್ಸ್‌ ಆರ್ಗನೈಜೇಶನ್‌ನಿಂದ ಸೋಮವಾರ ಹೊಸಪೇಟೆಯ ವಾಲ್ಮೀಕಿ ಐಟಿಐನಲ್ಲಿ ಸಾಮೂಹಿಕ ಇಮೇಲ್‌ ಚಳವಳಿ ಹಮ್ಮಿಕೊಳ್ಳಲಾಗಿತ್ತು   

ಹೊಸಪೇಟೆ (ವಿಜಯನಗರ): ಮೊಬೈಲ್‌ ಪ್ರೀಪೇಯ್ಡ್‌ ರಿಚಾರ್ಜ್‌ ದರ ಹೆಚ್ಚಳ ವಿರೋಧಿಸಿ ಆಲ್‌ ಇಂಡಿಯಾ ಡೆಮೊಕ್ರಟಿಕ್‌ ಯುತ್‌ ಆರ್ಗನೈಜೇಶನ್‌ ಹಾಗೂ ಸ್ಟೂಡೆಂಟ್ಸ್‌ ಆರ್ಗನೈಜೇಶನ್‌ನಿಂದ ಸೋಮವಾರ ನಗರದಲ್ಲಿ ಇಮೇಲ್‌ ಚಳವಳಿ ನಡೆಸಲಾಯಿತು.

ನಗರದ ವಾಲ್ಮೀಕಿ ಐಟಿಐ, ವಿದ್ಯಾರಣ್ಯ ಐಟಿಐ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿಷಯ ಮನವರಿಕೆ ಮಾಡಿದ ಕಾರ್ಯಕರ್ತರು, ಖಾಸಗಿ ಟೆಲಿಕಾಂ ಕಂಪನಿಗಳ ಧೋರಣೆ ಖಂಡಿಸಿದರು. ಬಳಿಕ ಸಾಮೂಹಿಕವಾಗಿ ಇಮೇಲ್‌ ಚಳವಳಿ ನಡೆಸಿದರು.

ಎಐಡಿವೈಒ ಜಿಲ್ಲಾ ಅಧ್ಯಕ್ಷ ಪ್ರಶಾಂತ್ ಮಾತನಾಡಿ, ‘ಲಾಕ್‍ಡೌನ್, ಕರ್ಫ್ಯೂನಿಂದ ಜನರು ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದಾರೆ. ಇಂತಹ ಕಷ್ಟಕಾಲದಲ್ಲಿ ಮೊಬೈಲ್‌ ರಿಚಾರ್ಜ್ ದರ ಒಂದೇ ವರ್ಷದಲ್ಲಿ ಶೇ 80ರಿಂದ ಶೇ 100ರಷ್ಟು ಹೆಚ್ಚಿಸಲಾಗಿದೆ. ಜನಸಾಮಾನ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ದೂರಸಂಪರ್ಕ ಇಲಾಖೆ ಸಚಿವರಿಗೆ ಸಾಮೂಹಿಕವಾಗಿ ಇಮೇಲ್‌ ಕಳಿಸಿ ವಿರೋಧ ಸೂಚಿಸಲಾಗುತ್ತಿದೆ’ ಎಂದರು.

ADVERTISEMENT

ಸಂಘಟನೆಯ ಜಿಲ್ಲಾ ಸಂಚಾಲಕ ರಾಜಾ ಗುರಳ್ಳಿ, ಕಾರ್ಯದರ್ಶಿ ಎನ್‌.ಎಲ್‌. ಪಂಪಾಪತಿ, ಶೇಖರ್ ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.