ADVERTISEMENT

‘ಶಿವಲೀಲಾ’ ಸಿನಿಮಾಗೆ ಥಿಯೇಟರ್‌–ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 2:39 IST
Last Updated 20 ಜನವರಿ 2026, 2:39 IST

ಹೊಸಪೇಟೆ: ರಂಗ ಕಲಾವಿದೆ ಮಂಜಮ್ಮ ಜೋಗತಿ ಅವರು ನಟಿಸಿರುವ ‘ಶಿವಲೀಲಾ’ ಸಿನಿಮಾ ಮಂಗಳಮುಖಿಯರ ಜೀವನವನ್ನು ಸಾರುವ ಸಿನಿಮಾವಾಗಿದ್ದು, ಅದರ ಪ್ರಸಾರಕ್ಕೆ ಚಿತ್ರಮಂದಿರಗಳನ್ನು ಒದಗಿಸಬೇಕು ಎಂದು ನಗರದ ಸಾಹಿತಿ ನೂರ್‌ ಜಹಾನ್‌ ಒತ್ತಾಯಿಸಿದ್ದಾರೆ.

‘ಈ ಸಿನಿಮಾದಿಂದ ಮಂಗಳಮುಖಿಯರ ಜೀವನ ಸುಧಾರಿಸುವ ಆಶಯ ಇದೆ, ಹಲವು ಉದಯೋನ್ಮುಖರೂ ಇದರಲ್ಲಿ ನಟಿಸಿದ್ದಾರೆ. ರಾಜ್ಯದಾದ್ಯಂತ ಕನಿಷ್ಠ ಎರಡು ಪ್ರದರ್ಶನಗಳನ್ನು ಕಾಣುವ ನಿಟ್ಟಿನಲ್ಲಿ ಸಂಘ ಸಂಸ್ಥೆಯವರು ಹಾಗೂ ಕಲಾವಿದರು ಒಟ್ಟಾಗಿ ಒತ್ತಾಯಿಸಿ ಸಿನಿಮಾ ಪ್ರಸಾರವಾಗುವಂತೆ ನೋಡಿಕೊಳ್ಳಬೇಕು’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT