ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮುಕ್ತವಾಗಿ ಓಡಾಡಿದ ಕರಡಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 9:22 IST
Last Updated 23 ಜೂನ್ 2022, 9:22 IST
ಕರಡಿ– ಸಾಂದರ್ಭಿಕ ಚಿತ್ರ
ಕರಡಿ– ಸಾಂದರ್ಭಿಕ ಚಿತ್ರ   

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಗಿರಿಸೀಮೆಯಲ್ಲಿ ಕರಡಿಯೊಂದು ಮುಕ್ತವಾಗಿ ಓಡಾಡಿರುವ ವಿಡಿಯೊ ವೈರಲ್‌ ಆಗಿದೆ.

ಗಿರಿಸೀಮೆಯ ಮಧ್ಯದಲ್ಲಿರುವ ರಸ್ತೆ, ಗಿಡ–ಮರಗಳ ನಡುವೆ ಕರಡಿಯೊಂದು ಬುಧವಾರ ಮಧ್ಯಾಹ್ನ ಓಡಾಡಿದೆ. ಇದನ್ನು ಗಮನಿಸಿದ ಅಲ್ಲಿನ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ವಿಶ್ವವಿದ್ಯಾಲಯದಿಂದ ಸ್ವಲ್ಪವೇ ದೂರದಲ್ಲಿ ಕರಡಿಧಾಮವಿದೆ. ಜನರ ಓಡಾಟ ಕಡಿಮೆ ಇರುವುದರಿಂದ ಆಗಾಗ ಕರಡಿ, ಚಿರತೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT