ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ ಶೋಭಾಯಾತ್ರೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ರಾಮನಗರದ ರಥಬೀದಿಯ ಪಾದಗಟ್ಟೆ ಆಂಜನೇಯ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನೆಗೆ ತಾಲ್ಲೂಕಿನ ವಿವಿಧ ಕಡೆಗಳಿಂದ ಯುವಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಆಗಮಿಸಿದ್ದರು. ಕೂಡ್ಲಿಗಿ ವೃತ್ತ, ಕೊಟ್ಟೂರು ರಸ್ತೆ, ಬೈಪಾಸ್ ವೃತ್ತದ ಮೂಲಕ ಬಸವೇಶ್ವರ ಬಜಾರ್‍ನ ರಸ್ತೆಯಲ್ಲಿ ಮೆರವಣಿಗೆ ಸಾಗಿತು.
ಡೊಳ್ಳು, ಸಮಾಳ, ನಂದಿಕೋಲು, ಬೊಂಬೆಕುಣಿತ, ತಾಷರಂಡೋಲು, ಹಲಗೆ ವಾದನ, ಮಹಿಳೆಯರ ಡೊಳ್ಳುವಾದನ, ಕಹಳೆ ವಾದನ, ಕೋಲಾಟ ಮತ್ತು ಡಿ.ಜೆ ಮ್ಯೂಸಿಕ್‍ಗೆ ಯುವಕರು ಸಾಮೂಹಿಕವಾಗಿ ಹೆಜ್ಜೆ ಹಾಕಿದರು.
ಶಾಸಕ ಕೆ.ನೇಮರಾಜನಾಯ್ಕ, ಪುರಸಭೆ ಸದಸ್ಯ ಬಿ.ಗಂಗಾಧರ, ನಾಗರಾಜ ಜನ್ನು, ಮಾಜಿ ಸದಸ್ಯ ಬಾದಾಮಿ ಮೃತ್ಯುಂಜಯ, ಸಂಘಟನೆಯ ಮುಖಂಡರಾದ ಬಿ.ಚಂದ್ರಶೇಖರ್, ಉಪ್ಪಾರ ಅಶೋಕ, ಚಿಂತ್ರಪಳ್ಳಿ ನಾಗರಾಜ, ಕೆ.ಎಂ.ಶಿವಶಂಕರಯ್ಯ, ಬಿ.ವಿ.ಆರ್ಟ್ಸ್ ನಾಗರಾಜ್, ಸಂತೋಷ್ ಇದ್ದರು.
ಬಿಗಿ ಬಂದೋಬಸ್ತ್‌ಗಾಗಿ 450ಕ್ಕೂ ಹೆಚ್ಚು ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗಿತ್ತು. ಡಿವೈಎಸ್ ಮಲ್ಲೇಶಪ್ಪ ಸೇರಿದಂತೆ ನಾಲ್ವರು ಸಿಪಿಐ, ಐವರು ಪಿಎಸ್‍ಐ ಇದ್ದರು. ರಸ್ತೆಯುದ್ದಕ್ಕೂ ಅಲ್ಲಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.