ADVERTISEMENT

ಹೂವಿನಹಡಗಲಿ | ಗಣೇಶೋತ್ಸವ: ಯುವಕರಿಂದ ರಕ್ತದಾನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 14:39 IST
Last Updated 9 ಸೆಪ್ಟೆಂಬರ್ 2024, 14:39 IST
ಹೂವಿನಹಡಗಲಿ ಸೊಪ್ಪಿನ ಕಾಳಮ್ಮ ಬಡಾವಣೆಯಲ್ಲಿ ಗಣೇಶೋತ್ಸವ ಪ್ರಯುಕ್ತ ಯುವಕರು ರಕ್ತದಾನ ಮಾಡಿದರು.
ಹೂವಿನಹಡಗಲಿ ಸೊಪ್ಪಿನ ಕಾಳಮ್ಮ ಬಡಾವಣೆಯಲ್ಲಿ ಗಣೇಶೋತ್ಸವ ಪ್ರಯುಕ್ತ ಯುವಕರು ರಕ್ತದಾನ ಮಾಡಿದರು.   

ಹೂವಿನಹಡಗಲಿ: ಪಟ್ಟಣದ ಸೊಪ್ಪಿನ ಕಾಳಮ್ಮ ಬಡಾವಣೆಯಲ್ಲಿ ಮಲ್ಲಿಕಾರ್ಜುನ ಯುವಕ ಸಂಘದಿಂದ ಗಣೇಶೋತ್ಸವ ಪ್ರಯುಕ್ತ ಸೋಮವಾರ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಸಂಘದ ಸದಸ್ಯರು, ಯುವಕರು ಸೇರಿ 20 ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಎಂಟು ಜನರು ನೇತ್ರದಾನಕ್ಕೆ ನೋಂದಣಿ ಮಾಡಿಸಿದರು.

ಸಂಘದ ಯುವ ಮುಖಂಡ ಎಸ್.ಎಸ್.ಅರುಣ್ ಮಾತನಾಡಿ, ‘ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಬಡಾವಣೆಯ ಗಣೇಶೋತ್ಸವದಲ್ಲಿ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಯೋಗಾಭ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಬಡಾವಣೆಯ ನಾಗರಿಕರ ಸಹಕಾರದಿಂದ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮ ಆಯೋಜಿಸಿದ್ದೇವೆ’ ಎಂದು ಹೇಳಿದರು.

ADVERTISEMENT

ಆರೋಗ್ಯಧಾಮ ಆಸ್ಪತ್ರೆಯ ಡಾ.ಬಿ.ನಾಗನಗೌಡ ಮತ್ತು ಸಿಬ್ಬಂದಿ ಆರೋಗ್ಯ ತಪಾಸಣೆ ಶಿಬಿರ ನಡೆಸಿಕೊಟ್ಟರು. ಯುವಕರಾದ ಕೆ. ನವೀನ, ಮಂಜುನಾಥ, ಅರುಣ್, ಅಕ್ಷಯ್, ನಿಖಿಲ್, ಅನಿಲ್, ಮೋಹನ್ ಪರಶೆಟ್ಟಿ, ಶಿವಪ್ರಸಾದ್ ಮೇಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.