ADVERTISEMENT

‘ಏಳನೇ ವೇತನ ನಿವೃತ್ತ ನೌಕರರಿಗೆ ತಾರತಮ್ಯ‘

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 16:17 IST
Last Updated 12 ಸೆಪ್ಟೆಂಬರ್ 2024, 16:17 IST
ಹರಪನಹಳ್ಳಿಯಲ್ಲಿ ರಾಜ್ಯ ನಿವೃತ್ತ ನೌಕರರ ಸಂಘ, ಬಾಧಿತ ನೌಕರರ ಹೋರಾಟ ಸಮಿತಿಗಳ ತಾಲ್ಲೂಕು ಘಟಕದ ಪದಾಧಿಕಾರಿಗಳು ತಾಲ್ಲೂಕು ಆಡಳಿತ ಸೌಧದಲ್ಲಿ ಗುರುವಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು
ಹರಪನಹಳ್ಳಿಯಲ್ಲಿ ರಾಜ್ಯ ನಿವೃತ್ತ ನೌಕರರ ಸಂಘ, ಬಾಧಿತ ನೌಕರರ ಹೋರಾಟ ಸಮಿತಿಗಳ ತಾಲ್ಲೂಕು ಘಟಕದ ಪದಾಧಿಕಾರಿಗಳು ತಾಲ್ಲೂಕು ಆಡಳಿತ ಸೌಧದಲ್ಲಿ ಗುರುವಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು   

ಹರಪನಹಳ್ಳಿ: ಏಳನೇ ವೇತನ ಆಯೋಗದ ವರದಿ ಅನುಷ್ಠಾನದಲ್ಲಿ ನಿವೃತ್ತ ಸರ್ಕಾರಿ ನೌಕರರಿಗೆ ತಾರತಮ್ಯವಾಗಿದೆ ಎಂದು ಆರೋಪಿಸಿ ರಾಜ್ಯ ನಿವೃತ್ತ ನೌಕರರ ಸಂಘ, ಬಾಧಿತ ನೌಕರರ ಹೋರಾಟ ಸಮಿತಿಗಳ ತಾಲ್ಲೂಕು ಘಟಕದ ಪದಾಧಿಕಾರಿಗಳು ತಾಲ್ಲೂಕು ಆಡಳಿತ ಸೌಧದಲ್ಲಿ ಗುರುವಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

2022ರ ಜುಲೈ ರಿಂದ  2024ರ ಜುಲೈ 1ರ ಮಧ್ಯದ ಅವಧಿಯಲ್ಲಿ ನಿವೃತ್ತ ನೌಕರರಿಗೆ ಆರ್ಥಿಕ ಸೌಲಭ್ಯ ನೀಡಿಲ್ಲ ಒಟ್ಟು 25 ತಿಂಗಳ ವೇತನದಲ್ಲಿ ನಿವೃತ್ತ ನೌಕರರಿಗೆ ಅನ್ಯಾಯವಾಗಿರುವುದನ್ನು ಸರಿಪಡಿಸಬೇಕು ಎಂದು ಬಾಧಿತ ನೌಕರರ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಸಿದ್ದಲಿಂಗನಗೌಡ ಒತ್ತಾಯಿಸಿದರು.

ತಾಲ್ಲೂಕು ಸಂಚಾಲಕರಾದ ರಾಮಮೂರ್ತಿ, ಶಿವಾನಂದಪ್ಪ ಕೌಟಿ, ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶೇಖರ ಗೌಡ ಪಾಟೀಲ್, ಎಚ್.ದೇವೆಂದ್ರಗೌಡ, ತಿಪ್ಪೆರುದ್ರಪ್ಪ, ಐ.ಕೊಟ್ರಪ್ಪ, ಶೇಖರಗೌಡ ಪಾಟೀಲ್, ಬಿ.ಶೇಖರಪ್ಪ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.