ADVERTISEMENT

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ; 12ರಿಂದ ಮೂಲ ದಾಖಲೆಗಳ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 6 ಜೂನ್ 2023, 16:17 IST
Last Updated 6 ಜೂನ್ 2023, 16:17 IST

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯಲ್ಲಿ 2022-23ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ (ಜಿಪಿಟಿಆರ್) ಸಂಬಂಧಿಸಿದಂತೆ  ಅಂತಿಮ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳ ಮೂಲ ದಾಖಲೆಗಳ ಸ್ವೀಕಾರ ಹಾಗೂ ನೈಜತೆ ಪರಿಶೀಲನಾ ಪ್ರಕ್ರಿಯೆ ಇದೇ 12ರಿಂದ ಆರಂಭಗೊಳ್ಳಲಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ) ಜಿ.ಕೊಟ್ರೇಶ್ ತಿಳಿಸಿದ್ದಾರೆ.

12ರಿಂದ 16 ರವರೆಗೂ ಆಯಾ ದಿನಾಂಕದಂದು ನಿಗದಿಪಡಿಸಿದ ವಿಷಯವಾರು ಅಭ್ಯರ್ಥಿಗಳು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಹೊಸಪೇಟೆಯ ಚಿತ್ತವಾಡ್ಗಿಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಾಜರಾಗಿ ನೈಜತೆ ಪರಿಶೀಲನೆ ಮಾಡಿಕೊಳ್ಳಬಹುದು.

ವಿವಿಧ ಮೀಸಲಾತಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಸಂಬಂಧಿತ ಪ್ರವರ್ಗವಾರು ಮೂಲ ದಾಖಲೆಗಳನ್ನು ಸಲ್ಲಿಸಬೇಕು. ಅಭ್ಯರ್ಥಿಗಳು ಪೊಲೀಸ್ ಪರಿಶೀಲನೆಗೆ ಸಹ ಆನ್‌ಲೈನ್ ಮೂಲಕ ಜಿಲ್ಲಾ ಎಸ್ಪಿ ಕಚೇರಿಯಿಂದ ಪ್ರಮಾಣ ಪತ್ರ ಪಡೆದುಕೊಳ್ಳಬೇಕು. ಜಿಲ್ಲಾ ವೈದ್ಯಾಧಿಕಾರಿಗಳಿಂದ ವೈದ್ಯಕೀಯ ಪ್ರಮಾಣ ಪತ್ರ ಸೇರಿದಂತೆ ಆನ್‌ಲೈನ್ ಅರ್ಜಿ ಸಲ್ಲಿಕೆ ವೇಳೆ ನಮೂದಿಸಲಾದ ಎಲ್ಲಾ ದಾಖಲೆಗಳ ಮೂಲ ಪತ್ರದೊಂದಿಗೆ ಹಾಜರಾಗಬೇಕು ಎಂದು ಅವರು ತಿಳಿಸಿದ್ದಾರೆ.

ADVERTISEMENT

12ರಂದು ಆಂಗ್ಲಭಾಷೆ (ಕಕ), ಜೀವಶಾಸ್ತ್ರ (ಕಕ) ವಿಷಯ, 13ರಂದು ಸಮಾಜ ಪಾಠ(ಕಕ) ಕನ್ನಡ ಕ್ರ.ಸಂ. 1 ರಿಂದ 100, 14ರಂದು ಸಮಾಜ ಪಾಠ(ಕಕ) ಕ್ರ.ಸಂ. 101 ರಿಂದ 170, 15 ರಂದು ಪಿಸಿಎಂ ಕನ್ನಡ(ಕಕ) ಹಾಗೂ 16 ರಂದು ಆಂಗ್ಲ, ಸಮಾಜ, ಗಣಿತ ಮತ್ತು ಜೀವಶಾಸ್ತ್ರ ವಿಷಯದ ಅಭ್ಯರ್ಥಿಗಳು ಹಾಜರಾಗಬೇಕು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.