ADVERTISEMENT

ಮೂವರು ವಿದ್ಯಾರ್ಥಿಗಳಿಗೆ ಕೋವಿಡ್: ಹಗರಿಬೊಮ್ಮನಹಳ್ಳಿಯ ಶಾಲೆ ಬಂದ್ 

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 14:48 IST
Last Updated 3 ಜನವರಿ 2022, 14:48 IST
ಮೂವರು ವಿದ್ಯಾರ್ಥಿಗಳಿಗೆ ಕೋವಿಡ್: ಹಗರಿಬೊಮ್ಮನಹಳ್ಳಿಯ ಶಾಲೆ ಬಂದ್ 
ಮೂವರು ವಿದ್ಯಾರ್ಥಿಗಳಿಗೆ ಕೋವಿಡ್: ಹಗರಿಬೊಮ್ಮನಹಳ್ಳಿಯ ಶಾಲೆ ಬಂದ್    

ಹಗರಿಬೊಮ್ಮನಹಳ್ಳಿ: ಪಟ್ಟಣದ ಹಳೇ ಊರಿನ ಪಾಪುಸ್ವಾಮಿ ಸರ್ಕಾರಿ ಪ್ರೌಢಶಾಲೆಯ ಮೂರು ಜನ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಶಾಲೆಯನ್ನು ಸಂಪೂರ್ಣ ಮುಚ್ಚಲಾಗಿದ್ದು, ಸೋಮವಾರದಿಂದ ರಜೆ ಘೋಷಿಸಲಾಗಿದೆ.

ಎಂಟನೆಯ ತರಗತಿಯ ಇಬ್ಬರು ಮತ್ತು 9ನೇ ತರಗತಿಯ ಒಬ್ಬ ವಿದ್ಯಾರ್ಥಿಗೆ ಸೋಂಕು ತಗುಲಿದೆ. ಡಿ.31 ರಂದು ಎಲ್ಲ ವಿದ್ಯಾರ್ಥಿಗಳಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ನಡೆಸಲಾಗಿದ್ದು ಸೋಂಕು ತಗುಲಿರುವುದು ಗೊತ್ತಾಗಿದೆ.

ಮಾತು ಬದಲಿಸಿದ ವೈದ್ಯಾಧಿಕಾರಿ: ವಿದ್ಯಾರ್ಥಿಗಳಿಗೆ ಶಂಕಿತ ಒಮೈಕ್ರಾನ್ ಗುಣಲಕ್ಷಣಗಳು ಇರುವುದಾಗಿ ಹೇಳಿದ್ದ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶಿವರಾಜ್ ಬಳಿಕ ಮೂರು ಜನ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದೆ, ಓಮೈಕ್ರಾನ್ ಅಲ್ಲ ಎಂದು ಸ್ಪಷ್ಟನೆ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.