ADVERTISEMENT

ಸಂಗೀತ ಕಲೆಯಲ್ಲಿ ಸಂತೋಷವಿದೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 15:25 IST
Last Updated 21 ಸೆಪ್ಟೆಂಬರ್ 2022, 15:25 IST
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಮಾತನಾಡಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಮಾತನಾಡಿದರು   

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ‘ಬಿ’ ಮ್ಯೂಸಿಕ್ ಮತ್ತು ‘ಎಂ’ ಮ್ಯೂಸಿಕ್ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಬುಧವಾರ ವಿ.ವಿ.ಯಲ್ಲಿ ನಡೆಯಿತು.

ಕಲಾವಿದ ಮದಿರೆ ಮರಿಸ್ವಾಮಿ ಉದ್ಘಾಟಿಸಿ, ಸಂಗೀತ ಕಲೆಯಲ್ಲಿ ಸಂತೋಷವಿದೆ. ಆದರೆ, ಕಲಾವಿದರ ಬದುಕು ಸಂತೋಷದಿಂದ ಕೂಡಿಲ್ಲ. ಅವರ ಸೂಕ್ತ ಗೌರವ, ಸೌಲಭ್ಯ ಸಿಗುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಯಾವುದೇ ಜ್ಞಾನ ಪಡೆಯಬೇಕಾದರೆ ಕಠಿಣ ಪರಿಶ್ರಮ ಅಗತ್ಯ. ಶ್ರದ್ಧಾ, ಭಕ್ತಿಯಿಂದ ಗುರುಗಳನ್ನು ಗೌರವದಿಂದ ಕಂಡಾಗ ಮೇಲೆ ಬರಲು ಸಾಧ್ಯವಾಗುತ್ತದೆ ಹೇಳಿದರು.

ADVERTISEMENT

ಕುಲಸಚಿವ ಪ್ರೊ. ಎ ಸುಬ್ಬಣ್ಣ ರೈ ಮಾತನಾಡಿ, ಹಿರಿಯ ಕಲಾವಿದರ ಬದುಕು ಯುವ ಪೀಳಿಗೆಗೆ ಪ್ರೇರಣೆಯಾಗಬೇಕು. ಕನ್ನಡ ವಿಶ್ವವಿದ್ಯಾಲಯ ನುಡಿಗೆ ಸಂಬಂಧಿಸಿ ವಿ.ವಿ.ಯಾಗಿದ್ದು, ಮಾತೃ ಭಾಷೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ ಎಂದರು.

ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಗೋವಿಂದ, ಅಧ್ಯಾಪಕರಾದ ಜ್ಯೋತಿ, ತಿಮ್ಮಣ್ಣ ಭೀಮರಾಯ್, ತೇಜಸ್ವಿ ಹೆಗಡೆ, ಸಂಶೋಧನಾರ್ಥಿ ಅಂಜಲಿ, ಶರಣಪ್ಪ, ರಾಜೇಶ್ ಹಳೆಮನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.