ಹರಪನಹಳ್ಳಿ: ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಸುರಿದ ಮಳೆಗೆ ಎರಡು ಕೆರೆಗಳು ಭರ್ತಿಯಾಗಿದ್ದು, 6 ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಚಟ್ನಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯು.ಕಲ್ಲಹಳ್ಳಿ ಕೆರೆ, ಕುಂಚೂರು ಗ್ರಾಮದ 500 ಎಕರೆ ವಿಸ್ತೀರ್ಣ ಇರುವ ಕುಂಚೂರು ಕೆರೆ ಭರ್ತಿಯಾಗಿ ಕೋಡಿ ಬಿದ್ದಿವೆ. ಅದೇ ಗ್ರಾಮದಲ್ಲಿ ರಶೀದಾಬಿ, ಮನ್ನಾಖಾನ್ , ತೆಲಿಗಿಯಲ್ಲಿ ಗುರುಬಸಪ್ಪ, ಕೊಟ್ರಪ್ಪ, ನಾಗೇಂದ್ರಪ್ಪ, ಗುರುಶಾಂತನಹಳ್ಳಿಯಲ್ಲಿ ಗುರುಲಿಂಗಪ್ಪ ಅವರ ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.