ಹರಪನಹಳ್ಳಿ (ವಿಜಯನಗರ ಜಿಲ್ಲೆ): ಇಲ್ಲಿಗೆ ಸಮೀಪದ ಬಂಡ್ರಿ ಬಳಿ ಮಂಗಳವಾರ ಸಂಜೆ ಖಾಸಗಿ ಶಾಲಾ ಮಿನಿ ಬಸ್ ರಸ್ತೆ ಬದಿಯ ಹೊಂಡಕ್ಕೆ ಇಳಿದಿದ್ದು, 30 ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.
ಇಲ್ಲಿನ ಯಲ್ಲಾಪುರದ ಚಾಣಕ್ಯ ಆಂಗ್ಲ ಮಾಧ್ಯಮ ಶಾಲೆಯ ಬಸ್‌ನಲ್ಲಿ ಅಲಮರಸೀಕೆರೆಯ 20 ಮತ್ತು ಮಾಡಲಗೆರೆಯ 10 ವಿದ್ಯಾರ್ಥಿಗಳಿದ್ದರು. ಮಂಡ್ಯ–ಹಡಗಲಿ ರಾಜ್ಯ ಹೆದ್ದಾರಿಯಲ್ಲಿ ಬಸ್ ಹೊರಟಿತ್ತು, ಎದುರಿಗೆ ಕಾರು ವೇಗವಾಗಿ ಬಂದಿದ್ದರಿಂದ ಬಸ್ ಚಾಲಕ ತಿಮ್ಮಣ್ಣ ಅಪಘಾತ ತಪ್ಪಿಸಲು ಯತ್ನಿಸಿದರು. ಆಗ ನಿಯಂತ್ರಣ ಕಳೆದುಕೊಂಡ ಕಾರಣ ಬಸ್ ಹೊಂಡಕ್ಕೆ ಇಳಿದಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ ಭೇಟಿ ನೀಡಿದರು. ಬಸ್‌ನಲ್ಲಿದ್ದ ಎಲ್ಲ ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.