ಹೊಸಪೇಟೆಯ ವಿವಿಧ ಕಡೆಗಳಲ್ಲಿ ಮಂಗಳವಾರ ಬೆಳಿಗ್ಗೆ ತುಂತುರು ಮಳೆಯಲ್ಲಿ ಕಾಣಿಸಿದ ದೃಶ್ಯಗಳು
–ಪ್ರಜಾವಾಣಿ ಚಿತ್ರ/ ಲವ ಕೆ.
ಹೊಸಪೇಟೆ (ವಿಜಯನಗರ): ಪೆಂಜಲ್ ಚಂಡಮಾರುತದ ಪ್ರಭಾವದಿಂದ ವಿಜಯನಗರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸೋಮವಾರ ರಾತ್ರಿ ಇಡೀ ಜಿಟಿ ಜಿಟಿ ಮಳೆಯಾಗಿದ್ದು, ಮಂಗಳವಾರ ಬೆಳಿಗ್ಗೆ ಸಹ ತುಂತುರು ಮಳೆ ಮುಂದುವರಿದಿದೆ.
ಬೆಳಿಗ್ಗೆ ಶಾಲೆಗೆ ಹೊರಟ ವಿದ್ಯಾರ್ಥಿಗಳಲ್ಲಿ ಕೆಲವರು ಛತ್ರಿ ಹಿಡಿದುಕೊಂಡಿದ್ದರೆ, ಕೆಲವರು ರೈನ್‌ಕೋಟ್ ಧರಿಸಿದ್ದರು. ಇನ್ನು ಕೆಲವರು ಸೋನೆ ಮಳೆಯಲ್ಲಿ ನೆನೆದುಕೊಂಡೇ ಶಾಲೆಗೆ ಹೋಗುತ್ತಿದ್ದುದು ಕಾಣಿಸಿತು.
‘ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಸದ್ಯ ಮಳೆಯಿಂದ ಹಾನಿ ಉಂಟಾದ ಕುರಿತಂತೆ ಎಲ್ಲಿಂದಲೂ ವರದಿ ಬಂದಿಲ್ಲ. ಬೆಳೆ ಸಂರಕ್ಷಣೆಗೆ ಸಂಬಂಧಿಸಿದಂತೆ ಕೃಷಿ, ತೋಟಗಾರಿಕಾ ಇಲಾಖೆಗಳು ರೈತರಿಗೆ ಅಗತ್ಯದ ನೆರವು ನೀಡುತ್ತಿವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.