ADVERTISEMENT

ಹಿಜಾಬ್ ತೀರ್ಪು: ವಿಜಯನಗರದಲ್ಲಿ ವಿಜಯೋತ್ಸವ, ಪ್ರತಿಭಟನೆ ನಿರ್ಬಂಧ

ಭದ್ರತೆಗೆ 700 ಪೊಲೀಸರ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 7:18 IST
Last Updated 15 ಮಾರ್ಚ್ 2022, 7:18 IST
ಹಿಜಾಬ್ ತೀರ್ಪು: ವಿಜಯನಗರದಲ್ಲಿ ವಿಜಯೋತ್ಸವ, ಪ್ರತಿಭಟನೆ ನಿರ್ಬಂಧ
ಹಿಜಾಬ್ ತೀರ್ಪು: ವಿಜಯನಗರದಲ್ಲಿ ವಿಜಯೋತ್ಸವ, ಪ್ರತಿಭಟನೆ ನಿರ್ಬಂಧ   

ಹೊಸಪೇಟೆ (ವಿಜಯನಗರ): ಹಿಜಾಬ್‌–ಕೇಸರಿ ಶಾಲಿನ ವಿವಾದದ ಕುರಿತು ಹೈಕೋರ್ಟ್‌ ತೀರ್ಪು ಹೊರಬಿದ್ದಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತವು ಎಲ್ಲ ರೀತಿಯ ವಿಜಯೋತ್ಸವ, ಪ್ರತಿಭಟನೆ ಮೇಲೆ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.

ಸರ್ಕಾರಿ/ಅನುದಾನಿತ/ಅನುದಾನರಹಿತ ಶಾಲಾ ಕಾಲೇಜುಗಳ 200 ಮೀಟರ್‌ ಸುತ್ತ ವಿದ್ಯಾರ್ಥಿ, ಸಿಬ್ಬಂದಿ ಹೊರತುಪಡಿಸಿ ಅನ್ಯರ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಆದೇಶ ಹೊರಡಿಸಿದ್ದಾರೆ. ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹೊರಡಿಸಿರುವ ಈ ಆದೇಶವು ಮಾ. 28ರ ವರೆಗೆ ಜಾರಿಯಲ್ಲಿರುತ್ತದೆ.

ಭದ್ರತೆಗೆ 700 ಪೊಲಿಸರು:‘ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆಗೆ 700 ಪೊಲೀಸರು, ಮೂರು ಡಿಎಆರ್‌, ಎರಡು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಕಾಲೇಜು, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತಡೆಯಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.