ವಿಜಯನಗರ ಜಿಲ್ಲೆ ಹೂವಿನ ಹಡಗಲಿಯಲ್ಲಿ ನಡೆದ ಊರಮ್ಮ ದೇವಿ ಜಾತ್ರೆಯ ವೈಭವವನ್ನು ಜನ ಕಣ್ತುಂಬಿಕೊಂಡರು. ಪಟ್ಟಣದ ಸರ್ವ ಜನಾಂಗದ ಆರಾಧ್ಯ ದೈವ, ಅಧಿ ದೇವತೆ ಊರಮ್ಮ ದೇವಿಯ ಆರಾಧನೆ ಒಂದು ವಾರ ಕಾಲ ನಡೆಯಿತು. ಮಳೆ, ಬೆಳೆ ಸಮೃದ್ಧಿ, ಆರೋಗ್ಯ, ನೆಮ್ಮದಿಗಾಗಿ ಪ್ರಾರ್ಥಿಸಿ ಪ್ರತಿ ಐದು ವರ್ಷಕ್ಕೊಮ್ಮೆ ಇಲ್ಲಿ ದೇವಿ ಜಾತ್ರೆ ಆಚರಿಸಲಾಗುತ್ತಿದೆ. ಕೋವಿಡ್‌ನಿಂದಾಗಿ ಮುಂದೂಡಲಾಗಿದ್ದ ಜಾತ್ರೆಯನ್ನು ಈ ಬಾರಿ 9ನೇ ವರ್ಷಕ್ಕೆ ಆಚರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.