ADVERTISEMENT

ಹೊಸಪೇಟೆ | ಧ್ವಜ ಕೆಟ್ಟು ವರ್ಷ, ಇಲ್ಲ ದುರಸ್ತಿ ಭಾಗ್ಯ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 6:14 IST
Last Updated 26 ಜನವರಿ 2026, 6:14 IST
ಕಳೆದ ವರ್ಷ ಗಣರಾಜ್ಯೋತ್ಸವ ಸಂದರ್ಭದಲ್ಲಿ ಬೃಹತ್ ತ್ರಿವರ್ಣ ಧ್ವಜ ದೇಶದ 2ನೇ ಅತಿ ಎತ್ತರದ ಧ್ವಜಸ್ತಂಭದಿಂದ ಕುಸಿದು ಬಿದ್ದ ಕ್ಷಣ
ಕಳೆದ ವರ್ಷ ಗಣರಾಜ್ಯೋತ್ಸವ ಸಂದರ್ಭದಲ್ಲಿ ಬೃಹತ್ ತ್ರಿವರ್ಣ ಧ್ವಜ ದೇಶದ 2ನೇ ಅತಿ ಎತ್ತರದ ಧ್ವಜಸ್ತಂಭದಿಂದ ಕುಸಿದು ಬಿದ್ದ ಕ್ಷಣ   

ಹೊಸಪೇಟೆ (ವಿಜಯನಗರ): ಇಲ್ಲಿನ ಜಿಲ್ಲಾ ಕ್ರೀಡಾಂಗಣದ ಮಧ್ಯಭಾಗದಲ್ಲಿರುವ ದೇಶದಲ್ಲೇ ಎರಡನೇ ಅತಿ ಎತ್ತರದ ಧ್ವಜಸ್ತಂಭ ಕೆಟ್ಟುಹೋಗಿ ಒಂದು ವರ್ಷ ಭರ್ತಿಯಾಗಿದ್ದು, ಇನ್ನೂ ದುರಸ್ತಿ ಭಾಗ್ಯ ಬಂದಿಲ್ಲ.

ಕಳೆದ ವರ್ಷ ಗಣರಾಜ್ಯೋತ್ಸವ ಸಂದರ್ಭದಲ್ಲಿ ಬೃಹತ್‌ ಧ್ವಜ ಮೇಲಕ್ಕೆ ಏರುತ್ತಿದ್ದಂತೆಯೇ ಅದರ ಸರಳು ತುಂಡಾಗಿ  405 ಅಡಿ ಎತ್ತರದ ಕಂಬದ ಶೇ 60ರಷ್ಟು ಭಾಗದಿಂದ ಧ್ವಜ ದೊಪ್ಪನೆ ಕುಸಿದು ಬಿದ್ದಿತ್ತು. 

ಪಿಡಬ್ಲ್ಯುಡಿ ಈ ಧ್ವಜಸ್ತಂಭದ ನಿರ್ಮಾಣ ಕಾರ್ಯ ಮಾಡಿದ್ದರೂ, ಸದ್ಯ ನಗರಸಭೆಗೆ ಈ ಧ್ವಜಸ್ತಂಭ ನಿರ್ವಹಣೆಯ ಹೊಣೆಗಾರಿಕೆ ಇದೆ. ದುರಸ್ತಿಗೆ ₹37 ಲಕ್ಷಕ್ಕೂ ಅಧಿಕ ವೆಚ್ಚ ತಗಲುವ ಅಂದಾಜು ಮಾಡಲಾಗಿದೆ. ಯಾವುದಾದರೂ ಒಂದು ಅನುದಾನವನ್ನು ಹೊಂದಿಸಿಕೊಂಡು ಧ್ವಜಸ್ತಂಭ ದುರಸ್ತಿ ಮಾಡೋಣ ಎಂದು ಶಾಸಕ ಎಚ್‌.ಆರ್‌.ಗವಿಯಪ್ಪ ಅವರು ತಿಳಿಸಿದ್ದು, ಜಿಲ್ಲಾಧಿಕಾರಿ ಬಳಿ ಇದರ ಬಗ್ಗೆ ಚರ್ಚಿಸಲಾಗುವುದು, ಡಿ.ಸಿ ಅವರು ಅನುದಾನ ಹೊಂದಿಸಿಕೊಡುವ ವಿಶ್ವಾಸ ಇದೆ. ಆದರೆ ಸದ್ಯಕ್ಕಂತೂ ಧ್ವಜಸ್ತಂಭ ದುರಸ್ತಿಯಾಗುವ ಸಾಧ್ಯತೆ ಇಲ್ಲ ಎಂದು ನಗರಸಭೆ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.