ADVERTISEMENT

ಹೊಸಪೇಟೆ: ಕೃಷಿಕರಿಗೆ 3 ದಿನದ ಉಚಿತ ತರಬೇತಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 6:06 IST
Last Updated 10 ಅಕ್ಟೋಬರ್ 2025, 6:06 IST

ಹೊಸಪೇಟೆ: ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕಂಪ್ಲಿಯಲ್ಲಿ ಅ.13ರಿಂದ 15 ರವರೆಗೆ ಸಾವಯುವ ಕೃಷಿ, ನೈಸರ್ಗಿಕ ಕೃಷಿ, ತೋಟಗಾರಿಕೆ ಹಾಗೂ ಹೈನುಗಾರಿಕೆ ವಿಷಯಗಳ ಬಗ್ಗೆ ಮೂರು ದಿನದ ತರಬೇತಿಯನ್ನು ಉಚಿತವಾಗಿ ಏರ್ಪಡಿಸಲಾಗಿದೆ.

ಉಚಿತ ಊಟ ಮತ್ತು ವಸತಿ ಸೌಕರ್ಯ ಇರುತ್ತದೆ. ಆಸಕ್ತ ರೈತರು ಮತ್ತು ರೈತ ಮಹಿಳೆಯರು ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಹೆಸರು ನೊಂದಾಯಿಸಲು ತಿಳಿಸಿದ್ದಾರೆ. ಸಹಾಯಕ ಕೃಷಿ ನಿರ್ದೇಶಕಿ ವಿದ್ಯಾವತಿ ಹೊಸಮನಿ ಮೊ.73535 33138 ಮತ್ತು ಕೃಷಿ ಅಧಿಕಾರಿ ಯೇಸುಬಾಬು ಮೊ.63606 45255 ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ಕೃಷಿ ತರಬೇತಿ ಕೇಂದ್ರ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT