ADVERTISEMENT

ಹೊಸಪೇಟೆ | ನಿರಾಶ್ರಿತರ ಯೋಜನಾ ಕೇಂದ್ರಕ್ಕೆ ನುಗ್ಗಿದ ಇಬ್ಬರು: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 2:00 IST
Last Updated 24 ಜನವರಿ 2026, 2:00 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹೊಸಪೇಟೆ: ತಾವು ನಗರಸಭೆ ಅಧಿಕಾರಿಗಳು ಎಂದು ಸುಳ್ಳು ಹೇಳಿ ಸೋಗಿ ಮಾರ್ಕೆಟ್‌ ಬಳಿ ನಿರಾಶ್ರಿತರಿಗಾಗಿ ಇರುವ ಸರ್ಕಾರದ ಯೋಜನಾ ಕೇಂದ್ರಕ್ಕೆ ಗುರುವಾರ ಮಧ್ಯರಾತ್ರಿ ನುಗ್ಗಿದ ಇಬ್ಬರು, ಕೇಂದ್ರದ ಉಸ್ತುವಾರಿ, ಒಂಭತ್ತು ಮಂದಿ ನಿರಾಶ್ರಿತರಲ್ಲಿ ಕೆಲವರ ಮೇಲೆ ಹಲ್ಲೆ ಮಾಡಿ ದಾಂಧಲೆ ನಡೆಸಿದ ಕುರಿತು ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೇಂದ್ರದ ಉಸ್ತುವಾರಿ ಭೀಮಸೇನ ರಾವ್ ಅವರು ಈ ಕುರಿತು ದೂರು ನೀಡಿದ್ದು, ಕೊಪ್ಪಳದ ಪತ್ರಕರ್ತ ಪ್ರಭು ಚೆನ್ನದಾಸರ (32) ಮತ್ತು ಕಾರ್ಮಿಕ ಲೋಕೇಶ್ ಎಂಬುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ಜನಶಕ್ತಿ ಸೇವಾ ಸಂಸ್ಥೆ ಹೆಸರಿನ ಎನ್‌ಜಿಒ ಈ ಕೇಂದ್ರದ ಗುತ್ತಿಗೆ ಪಡೆದು ಕಳೆದ ಒಂದು ವರ್ಷದಿಂದ ಕೇಂದ್ರದ ಉಸ್ತುವಾರಿ ನೋಡಿಕೊಂಡಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.