ಹೊಸಪೇಟೆ (ವಿಜಯನಗರ): ಇಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ (ಪಿಎಲ್‌ಡಿ) ಅಧ್ಯಕ್ಷರಾಗಿ ಅಮಾಜಿ ಹೇಮಣ್ಣ, ಉಪಾಧ್ಯಕ್ಷರಾಗಿ ಎ.ಪಂಪಾಪತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ನಡೆದ ಚುನಾವಣೆಯಲ್ಲಿ ಹೇಮಣ್ಣ ಸತತ 4ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಟಿ.ಎಸ್.ರವಿಕುಮಾರ ತಿಳಿಸಿದ್ದಾರೆ.
ನೂತನ ಆಡಳಿತ ಮಂಡಳಿಯ ಸದಸ್ಯರಾದ ಗೋವಿಂದಪ್ಪ ಮಳ್ಳಿ, ಎ.ಕೆ.ರಾಮಸ್ವಾಮಿ, ಜಾಕೀರ್ ಹುಸೇನ್, ಪಿ.ನಟರಾಜ್, ಲಂಬಾಡಿ ಲಕ್ಷ್ಮಣನಾಯ್ಕ್, ಬಿ.ಮಂಜುಳಾ, ಬಿ.ದೊಡ್ಡಪ್ಪ, ಪಿ.ಭಾರತಿ, ವಿ.ರೋಹಿಣಿ, ದೇವರಮನಿ ಯಲ್ಲಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.