ADVERTISEMENT

ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸಿ: ಸಿದ್ದಲಿಂಗ ಶಿವಚಾರ್ಯರು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 15:19 IST
Last Updated 24 ಆಗಸ್ಟ್ 2024, 15:19 IST
ಕೊಟ್ಟೂರು ತಾಲ್ಲೂಕು ಕೆ.ಅಯ್ಯನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಅಭಯ ಆಂಜನೇಯ ಸ್ವಾಮಿ ಪುನರ್ ಪ್ರಾಣ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಜ್ಜಯಿನಿ ಪೀಠಾಧೀಶ ಸಿದ್ಧಲಿಂಗಶಿವಾಚಾರ್ಯರು ಆಶೀರ್ವಚನ ನೀಡಿದರ
ಕೊಟ್ಟೂರು ತಾಲ್ಲೂಕು ಕೆ.ಅಯ್ಯನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಅಭಯ ಆಂಜನೇಯ ಸ್ವಾಮಿ ಪುನರ್ ಪ್ರಾಣ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಜ್ಜಯಿನಿ ಪೀಠಾಧೀಶ ಸಿದ್ಧಲಿಂಗಶಿವಾಚಾರ್ಯರು ಆಶೀರ್ವಚನ ನೀಡಿದರ    

ಕೊಟ್ಟೂರು: ಪಾಲಕರು ಮಕ್ಕಳಲ್ಲಿ ಶಿಕ್ಷಣದ ಜೊತೆ ಧಾರ್ಮಿಕ ಪ್ರಜ್ಞೆ ಹಾಗೂ ಸಂಸ್ಕಾರವನ್ನು ನೀಡಿದಾಗ ಅವರು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಉಜ್ಜಯಿನಿ ಪೀಠಾಧೀಶ ಸಿದ್ದಲಿಂಗ ಶಿವಚಾರ್ಯರು ಹೇಳಿದರು.

ತಾಲ್ಲೂಕಿನ ಕೆ. ಅಯ್ಯನಹಳ್ಳಿ ಗ್ರಾಮದಲ್ಲಿ ಶನಿವಾರ ಅಭಯ ಆಂಜನೇಯ ಸ್ವಾಮಿ ಪುನರ್ ಪ್ರಾಣ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

‘ಪ್ರತಿಯೊಂದು ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನ ಇರುತ್ತದೆ. ಇದರ ಅರ್ಥ ಆಭಯ ಆಂಜನೇಯ ಎಂದರೆ ಭಯವನ್ನು ದೂರ ಮಾಡುವ ಶಕ್ತಿ’ ಎಂದರು.

ADVERTISEMENT

ಎಡೆಯೂರಿನ ರೇಣುಕ ಶಿವಾಚಾರ್ಯರು, ಕೆ. ಅಯ್ಯನಹಳ್ಳಿ ಮಠದ ಮಹೇಶ್ವರ ಸ್ವಾಮೀಜಿ, ಹರಪನಹಳ್ಳಿ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ, ನಂದಿಪುರ ಮಠದ ಮಹೇಶ್ವರ ಸ್ವಾಮೀಜಿ, ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿ, ಬೆಣ್ಣಿಹಳ್ಳಿ ಮಠದ ಪಂಚಾಕ್ಷರಿ ಸ್ವಾಮೀಜಿ ಮುಂತಾದ ಮಠಾಧೀಶರು ಪಾಲ್ಗೊಂಡಿದ್ದರು.

ಶಾಸಕ ಕೆ.ನೇಮರಾಜನಾಯ್ಕ, ಮುಖಂಡರಾದ ಎಂ.ಎಂ.ಜೆ.ಹರ್ಷವರ್ಧನ್, ಪಿ.ಎಚ್. ದೊಡ್ಡರಾಮಣ್ಣ, ಗ್ರಾ.ಪಂ.ಅಧ್ಯಕ್ಷೆ ಹೇಮಾಕ್ಷಿ ರೇಣುಕಪ್ಪ, ಎಂ.ಯು ಪರಮೇಶ್ವರಯ್ಯ, ಎಂ.ಜಿ. ಕೊಟ್ರೇಶ್, ಎ.ಎಂ.ಕೊಟ್ರೇಶ್, ಕೆ.ನಾಗಪ್ಪ, ಎ.ಎಂ.ಶಿವಪ್ರಕಾಶ್, ಎಂ.ಜಿ. ವಿನಾಯಕ, ಎ.ಎಂ.ಜೆ. ಮಲ್ಲಿಕಾರ್ಜುನ, ಮಲ್ಲಿಕಾರ್ಜುನ ಸ್ವಾಮಿ ಕಲ್ಮಠ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.