ADVERTISEMENT

ಆಭರಣ ಕಳವು: ಪ್ರಕರಣ ದಾಖಲಾದ 12 ಗಂಟೆಯಲ್ಲಿ ಆರೋಪಿಗಳ ಸೆರೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 5:36 IST
Last Updated 3 ಜನವರಿ 2026, 5:36 IST
ಹರಪನಹಳ್ಳಿಯಲ್ಲಿ ಕಳವು ಮಾಡಿ ಸಿಕ್ಕಿಬಿದ್ದಿರುವ ಇಬ್ಬರು ಆರೋಪಿಗಳಿಂದ ಜಪ್ತಿ ಮಾಡಿರುವ ವಸ್ತುಗಳನ್ನು ಪೊಲೀಸರು ಶುಕ್ರವಾರ ಪ್ರದರ್ಶಿಸಿದರು
ಹರಪನಹಳ್ಳಿಯಲ್ಲಿ ಕಳವು ಮಾಡಿ ಸಿಕ್ಕಿಬಿದ್ದಿರುವ ಇಬ್ಬರು ಆರೋಪಿಗಳಿಂದ ಜಪ್ತಿ ಮಾಡಿರುವ ವಸ್ತುಗಳನ್ನು ಪೊಲೀಸರು ಶುಕ್ರವಾರ ಪ್ರದರ್ಶಿಸಿದರು   

ಹರಪನಹಳ್ಳಿ: ಇಬ್ಬರು ಶಿಕ್ಷಕಿಯರ ಮನೆಗಳಲ್ಲಿ ನಡೆದ ಎರಡು ಪ್ರತ್ಯೇಕ ಕಳವು ಪ್ರಕರಣವನ್ನು ದೂರು ಮನೆಗೆಲಸದ ಮಹಿಳೆ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾಯಕದಹಳ್ಳಿ ಗ್ರಾಮದ ಮಣಿಗೇರ ಸಂಗೀತಾ (35) ಹಾಗೂ ಜಿ.ವೆಂಕಟೇಶ (30) ಬಂಧಿತರು. ಅವರ ಬಳಿಯಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣ, ಪ್ರಕರಣಕ್ಕೆ ಬಳಸಿದ್ದ ಆಟೊ ಸೇರಿ ಒಟ್ಟು ₹22.60 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಬಾಣಗೇರಿಯಲ್ಲಿ ಶಿಕ್ಷಕಿ ಬಿ.ಶಹಾನಾಜ್ ಬೇಗಂ ಅವರು ಡಿ.30ರಂದು ಶಾಲೆಗೆ ತೆರಳಿದ್ದಾಗ ಕಳವು ನಡೆದಿತ್ತು. ಇನ್ನೊಂದು ಪ್ರಕರಣದಲ್ಲಿ ಅ.21ರಂದು ಜೋಯಿಸರಕೇರಿ ಶಿಕ್ಷಕಿ ಎಚ್.ವೀರಮ್ಮ ಅವರ ಮನೆಯಲ್ಲಿ ಕಳವು ಆಗಿತ್ತು.

ADVERTISEMENT

ಕಾರ್ಯಾಚರಣೆ ತಂಡದಲ್ಲಿದ್ದ ಡಿವೈಎಸ್ಪಿ ಸಂತೋಷ ಚೌವ್ಹಾಣ್, ಸಿಪಿಐ ಮಹಾಂತೇಶ್ ಸಜ್ಜನ್, ಪಿಎಸ್‍ಐ ಶಂಭುಲಿಂಗ ಹಿರೇಮಠ, ಬಿ.ಮೀನಾಕ್ಷಿ, ಸಿಬ್ಬಂದಿ ಆನಂದ, ರವಿ ದಾದಾಪುರ, ಮಾಲತೇಶ ಬಿಳಿಚೋಡು, ಯು.ನಾಗರಾಜ್, ವಾಸುದೇವ ನಾಯ್ಕ, ಸಿದ್ದಿ ಮುಬಾರಕ್, ಯರ‍್ರಿಸ್ವಾಮಿ, ವಸಂತಕುಮಾರ, ನಾರನಗೌಡ, ಜಗದೀಶ, ಮಾಬು ಸಾಹೇಬ, ಗುರುಪ್ರಸಾದ್, ಇಮಾಮ್ ಸಾಹೇಬ್, ಸಿಡಿಆರ್ ವಿಭಾಗದ ಕುಮಾರನಾಯ್ಕ, ಜೀಪ್ ಚಾಲಕ ಇಮಾಮ್ ಸಾಹೇಬ್, ನಾಗರಾಜ್ ನಾಯ್ಕ ಅವರುಗಳ ಕಾರ್ಯಕ್ಕೆ ಎಸ್ಪಿ ಜಾಹ್ನವಿ ಎಸ್‍., ಹೆಚ್ಚುವರಿ ಎಸ್ಪಿ ಜಿ.ಮಂಜುನಾಥ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.