ADVERTISEMENT

ಜಿನ ಮಂದಿರ ರಜತ ಮಹೋತ್ಸವ 21, 22ರಂದು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 2:14 IST
Last Updated 20 ಫೆಬ್ರುವರಿ 2026, 2:14 IST

ಹೂವಿನಹಡಗಲಿ: ಪಟ್ಟಣದ ಪಾರ್ಶ್ವನಾಥ ಸ್ವಾಮಿ ಜಿನ ಮಂದಿರದ ನೂತನ ಶಿಖರ ಕಳಸಾರೋಹಣ, ಧಾಮ ಸಂಪ್ರೋಕ್ಷಣೆ ಹಾಗೂ ಜಿನ ಮಂದಿರ ರಜತ ಮಹೋತ್ಸವ ಕಾರ್ಯಕ್ರಮವನ್ನು ಫೆ. 21, 22ರಂದು ಹಮ್ಮಿಕೊಳ್ಳಲಾಗಿದೆ ಎಂದು ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಚ್.ಎಸ್. ಪ್ರಶಾಂತ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘21ರಂದು ಬೆಳಿಗ್ಗೆ ಇಂದ್ರಪ್ರತಿಷ್ಠೆ, ಕಂಕಣ ಬಂಧನ, ಧ್ವಜಾರೋಹಣ ಇತರೆ ಕಾರ್ಯಕ್ರಮಗಳು ಜರುಗಲಿವೆ. 22ರಂದು ಬೆಳಿಗ್ಗೆ ಮಹಾಶಾಂತಿ ಹೋಮ, ಪಾರ್ಶ್ವನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ, ನೂತನ ಶಿಖರ ಕಳಸಾರೋಹಣ, ಧರ್ಮಸಭೆ ಹಾಗೂ ಶ್ರೀಗಳ ಪಾದಪೂಜೆ, ಧ್ವಜಾವರೋಹಣದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.

‘ಹೊಂಬುಜ ಕ್ಷೇತ್ರದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಗವಿಮಠದ ಹಿರಿಶಾಂತವೀರ ಸ್ವಾಮೀಜಿ, ಶಾಸಕ ಎಲ್.ಕೃಷ್ಣನಾಯ್ಕ ಇತರೆ ಗಣ್ಯರು ಭಾಗವಹಿಸಲಿದ್ದಾರೆ’ ಎಂದರು.

ADVERTISEMENT

ಜೈನ ಸಮಾಜದ ಉಪಾಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ಪದ್ಮರಾಜ ಜೈನ್, ಖಜಾಂಚಿ ಬಾಗೇಶ ಜೈನರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.