ADVERTISEMENT

ಆರೋಗ್ಯ ಇಲಾಖೆಯಲ್ಲಿ ಇನ್‌ಸೆಕ್ಟ್ ಕಲೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 15:37 IST
Last Updated 10 ಜೂನ್ 2025, 15:37 IST
<div class="paragraphs"><p>ಅರ್ಜಿ ಆಹ್ವಾನ</p></div>

ಅರ್ಜಿ ಆಹ್ವಾನ

   

ಹೊಸಪೇಟೆ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಪ್ರಸ್ತುತ ಖಾಲಿಯಿರುವ ಒಂದು ಇನ್‌ಸೆಕ್ಟ್ ಕಲೆಕ್ಟರ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಅರ್ಜಿ ಮತ್ತು ಮಾಹಿತಿಗೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ, 60 ಹಾಸಿಗೆ ಆಸ್ಪತ್ರೆ ಹಿಂಭಾಗ, ಹೊಸಪೇಟೆ ಇಲ್ಲಿ ಜೂನ್‌ 20ರೊಳಗೆ ಪಡೆಯಬಹುದು ಎಂದು ತಿಳಿಸಲಾಗಿದೆ.

ADVERTISEMENT

***

ಜುಲೈ 3ರಿಂದ ಸ್ಕೌಟ್ಸ್ ಪರೀಕ್ಷಾ ಶಿಬಿರ

ಹೊಸಪೇಟೆ: ಸ್ಕೌಟ್ಸ್ ಮತ್ತು ಗೈಡ್ಸ್‌ಗಳ ವಿಶೇಷ ಪರೀಕ್ಷೆಗಳಾದ ತೃತೀಯ ಸೋಪಾನ, ತೃತೀಯ ಚರಣ್, ಸುವರ್ಣ ಪಂಖ್ ಹಾಗೂ ನಿಪುಣ ಪರೀಕ್ಷಾ ಶಿಬಿರಗಳು ಜುಲೈ.3 ರಿಂದ 5 ರವರೆಗೆ ನಡೆಸಲಾಗುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಪಿ.ಮಂಜುನಾಥಪ್ಪ ತಿಳಿಸಿದ್ದಾರೆ.

ನಗರದ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಯೋಜನಾ ಸಮಿತಿ ಸದಸ್ಯರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಯೋಜನಾ ಸಮಿತಿ ಸದಸ್ಯರಾದ ಮಂಗಳಗೌರಿ, ಜಿ.ಎಂ.ರಾಜಶೇಖರ್, ಶೆರಿನಾ, ಗೀತಾಂಜಲಿ ಗೌಡ, ಶ್ರೀನಿವಾಸ್.ಜಿ.ಜೋಷಿ, ನಾಗಭೂಷಣ್  ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.