
ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಪಟ್ಟಣದಲ್ಲಿ ಅಂಬೇಡ್ಕರ್ ವೃತ್ತದಿಂದ ಸ್ಮಶಾನ ಕಾಂಪೌಂಡ್‌ವರೆಗೆ ಅಳವಡಿಸಲಾಗಿರುವ ಪಾದಚಾರಿ ಗ್ರಿಲ್‌ನಿಂದ ಯಾವುದೇ ಉಪಯೋಗ ಇಲ್ಲದೆ, ವಾಹನ ನಿಲುಗಡೆಗೂ ತೊಂದರೆ ಆಗಿದೆ, ತಕ್ಷಣ ಈ ಗ್ರಿಲ್ ತೆರವುಗೊಳಿಸಬೇಕು ಎಂದು ಕರ್ನಾಟಕ ಜನಶಕ್ತಿ ವೇದಿಕೆಯ ರಾಜ್ಯ ಕಾರ್ಯದರ್ಶಿ ಕರಿಯಪ್ಪ ಗುಡಿಮನಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ವಸ್ತುಸಂಗ್ರಹಾಲಯ ನೋಡಲು ನಿತ್ಯ ನೂರಾರು ಮಂದಿ ಬರುತ್ತಾರೆ, ಇಲ್ಲಿ ವಾಹನ ನಿಲ್ಲಿಸಿ ಮ್ಯೂಸಿಯಂನತ್ತ ತೆರಳುವುದು ವಾಡಿಕೆ, ಹೀಗಾಗಿ ಈ ಪಾದಚಾರಿ ರಸ್ತೆಯನ್ನು ಬಳಸುವವರೇ ಇಲ್ಲ, ಗ್ರಿಲ್ ತೆರವುಗೊಳಿಸಿದರೆ ಆ ಪಾದಚಾರಿ ರಸ್ತೆಯನ್ನು ವಾಹನ ನಿಲುಗಡೆಗೆ ಬಳಸಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದು ಸಾಧ್ಯ ಎಂದು ಹೇಳಿದ್ದಾರೆ.
ಕಮಲಾಪುರ ನಂಬರ್ ಓನ್ ಸೊಸೈಟಿಯಿಂದ ಸ್ಮಶಾನದ ವರೆಗೆ ಹಾಕಿರುವ ರಸ್ತೆ ಗ್ರಿಲ್ ತಕ್ಷಣ ತೆರವುಗೊಳಿಸದಿದ್ದರೆ ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.